ETV Bharat / state

ಯಾದಗಿರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗಮನ: ಸಾಮಾಜಿಕ ಅಂತರ ಉಲ್ಲಂಘನೆ

ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಪೂರ್ವಭಾವಿ ಸಭೆಗೆ ಈಶ್ವರ ಖಂಡ್ರೆ ಆಗಮಿಸಿದ್ದರು. ಈ ವೇಳೆ, ಅವರನ್ನ ಭೇಟಿ ಆಗಲು ಕಾರ್ಯಕರ್ತರು ಮುಗಿ ಬೀಳುವ ಮೂಲಕ ಸಾಮಾಜಿಕ ಅಂತರ ಮರೆಮಾಚಿದರು.

ಯಾದಗಿರಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಆಗಮನ

author img

By

Published : May 29, 2020, 7:59 PM IST

ಯಾದಗಿರಿ: ಕಾಂಗ್ರೆಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರ ಪಟ್ಟಾಭಿಷೇಕದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗಮಿಸಿದ್ದರು. ಈ ವೇಳೆ, ಅವರು ಸಾಮಾಜಿಕ ಅಂತರ ಉಲ್ಲಂಘಿಸುವ ಮೂಲಕ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣರಾದರು.

ಸಾಮಾಜಿಕ ಅಂತರ ಗಾಳಿಗೆ ತೂರಿ ಆತಂಕ ಸೃಷ್ಟಿ

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಪೂರ್ವಭಾವಿ ಸಭೆಗೆ ಈಶ್ವರ ಖಂಡ್ರೆ ಆಗಮಿಸಿದ್ದರು. ಈ ಸಭೆಯಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ, ಎಂಎಲ್​ಸಿ ತಿಪ್ಪಣಪ್ಪ ಕಮಕನೂರ, ಜಿಲ್ಲಾಧ್ಯಕ್ಷ ಮರಿಗೌಡ, ಮಾಜಿ ಎಂಎಲ್​​ಸಿ ಚನ್ನಾರೆಡ್ಡಿ ತನ್ನೂರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಕಾರ್ಯಾ ಧ್ಯಕ್ಷ ಈಶ್ವರ ಖಂಡ್ರೆ ಅವರನ್ನ ಭೇಟಿ ಆಗಲು ಕಾರ್ಯಕರ್ತರು ಮುಗಿ ಬೀಳುವ ಮೂಲಕ ಸಾಮಾಜಿಕ ಅಂತರ ಮರೆಮಾಚಿದರು.

ಇದರಲ್ಲಿ ಕೆಲ ಕಾರ್ಯಕರ್ತರು ಮಾಸ್ಕ್​​ ಕೂಡ ಧರಿಸದೇ ಸಾಮಾಜಿಕ ಅಂತರ ಗಾಳಿಗೆ ತೂರಿ ಆತಂಕ ಸೃಷ್ಟಿ ಮಾಡಿದರು. ಯಾದಗಿರಿ ಜಿಲ್ಲೆಯಲ್ಲಿಯೂ ಕೊರೊನಾ ವೈರಸ್​ನ ರಣಕೇಕೆ ಮುಂದುವರೆದಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಈ ನಡೆಗೆ ಜಿಲ್ಲಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.