ETV Bharat / state

'ಡ್ರಗ್​ ಕೇಸ್​ನಲ್ಲಿ ಸಿಲುಕಿದವನ್ನು ಒಳಗೆ ಹಾಕಿದಂತೆ ಫೇಕ್ ಸಿಡಿ ಮಾಡುವವರ ವಿರುದ್ಧವೂ ಕಠಿಣ ಕ್ರಮ ಆಗಲಿ' - Yadagiri latest news

ನಮ್ಮ ಚರಿತ್ರೆ ಹಾಗೂ ನಮ್ಮ ಶೀಲದ ಬಗ್ಗೆ ನಮಗೆ ಗೊತ್ತಿರುತ್ತೆ. ಆದರೆ, ಇತ್ತೀಚೆಗೆ ಬಂದ ಕೆಲ ಫೇಸ್​​ ಆ್ಯಪ್​ಗಳಿಂದ ಏನಾಗುತ್ತದೆ ಅನ್ನೋದು ಗೊತ್ತಾಗುತ್ತಿಲ್ಲ. ಮೊದಲು ಇಂತಹ ಆ್ಯಪ್​ಗಳನ್ನು ತೆಗೆಯುವ ಕೆಲಸ ಕೇಂದ್ರ ಸರ್ಕಾರದಿಂದ ಆಗಬೇಕು. ಯಾರೇ ತಪ್ಪು ಮಾಡಿದರೂ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ಯಾರೇ ಸಿ.ಡಿ ತಂದರೂ ಮೊದಲು ಪೊಲೀಸ್ ಇಲಾಖೆಗೆ ಕೊಟ್ಟು ತನಿಖೆ ಮಾಡಿಸಬೇಕು.

MLA Raju Gowda
ಸುರಪುರ ಶಾಸಕ ರಾಜೂಗೌಡ
author img

By

Published : Mar 6, 2021, 7:28 PM IST

ಯಾದಗಿರಿ : ಹೋಗೋ ಬರೋರೆಲ್ಲ ನಿಮ್ ಸಿ.ಡಿ ಇದೆ ಅಂತ ರಾಜಕಾರಣಿಗಳನ್ನು ಹೆದರಿಸುತ್ತಿದ್ದಾರೆ. ಈ ರೀತಿ ಹೆದರಿಕೆ ಹಾಕುತ್ತಾ ನಮ್ಮನ್ನು ಕೆಟ್ಟದಾಗಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸುರಪುರ ಶಾಸಕ ರಾಜೂಗೌಡ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಮಾತನಾಡಿದ ಅವರು, ಸಿ.ಡಿ ವಿಚಾರ ಹೀಗೆ ಮುಂದುವರಿದರೆ ನಾವು ರಾಜಕೀಯ ಮಾಡೋದೇ ಕಷ್ಟವಾಗುತ್ತದೆ. ಹಾಗಾಗಿ ಈ ವಿಚಾರವಾಗಿ ನಮ್ಮ ಸರ್ಕಾರ ಇದರ ಬಗ್ಗೆ ಸ್ಟ್ರಾಂಗ್ ಆಗಿ ಆ್ಯಕ್ಷನ್ ತೆಗೆದುಕೊಳ್ಳಬೇಕು ಎಂದು ಗೃಹ ಮಂತ್ರಿಗೆ ನಾನು ಒತ್ತಾಯ ಮಾಡುವೆ ಎಂದರು.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಪ್ರಕರಣ: ಸಂತ್ರಸ್ತೆ ಪತ್ತೆಗಾಗಿ ಪೊಲೀಸರಿಂದ ಪಿಜಿಗಳಲ್ಲಿ ನಿರಂತರ ಶೋಧ

ನಮ್ಮ ಚರಿತ್ರೆ ಹಾಗೂ ನಮ್ಮ ಶೀಲದ ಬಗ್ಗೆ ನಮಗೆ ಗೊತ್ತಿರುತ್ತೆ. ಆದರೆ, ಇತ್ತೀಚೆಗೆ ಬಂದ ಕೆಲ ಫೇಸ್ ಆ್ಯಪ್​ಗಳಿಂದ ಏನಾಗುತ್ತದೆ ಅನ್ನೋದು ಗೊತ್ತಾಗುತ್ತಿಲ್ಲ. ಮೊದಲು ಇಂತಹ ಆ್ಯಪ್​ಗಳನ್ನು ತೆಗೆಯುವ ಕೆಲಸ ಕೇಂದ್ರ ಸರ್ಕಾರದಿಂದ ಆಗಬೇಕು. ಯಾರೇ ತಪ್ಪು ಮಾಡಿದರೂ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ಯಾರೇ ಸಿ.ಡಿ ತಂದರೂ ಮೊದಲು ಪೊಲೀಸ್ ಇಲಾಖೆಗೆ ಕೊಟ್ಟು ತನಿಖೆ ಮಾಡಿಸಬೇಕು ಎಂದು ತಿಳಿಸಿದರು.

ಸುರಪುರ ಶಾಸಕ ರಾಜೂಗೌಡ

ವಿಧಿವಿಜ್ಞಾನ ಲ್ಯಾಬ್ ಟೆಸ್ಟ್ ಬಂದ ಕೂಡಲೇ ಅವರು ಯಾರೇ ಇರಲಿ ಅವರನ್ನು ಮೊದಲು ಜೈಲಿಗೆ ಹಾಕಿ. ಇಂತಹ ವಿಚಾರಗಳನ್ನ ಜನರು ನಾಲ್ಕು ದಿನದಲ್ಲಿ ಮರೆತು ಬಿಡುತ್ತಾರೆ. ಆದ್ರೆ ಈ ವಿಚಾರವಾಗಿ ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂರುವ ಪರಿಸ್ಥಿತಿ ಬಗ್ಗೆ ರಾಜಕಾರಣಿಗಳು ವಿಚಾರ ಮಾಡಬೇಕು.

ಇದನ್ನೂ ಓದಿ: ನನ್ನ ಹೆಸರು ಯಾಕೆ ಎಳೆದು ತರುತ್ತಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್​​

ನಮ್ಮವರು ಮಾಡಿಲ್ಲ ಅಂತ ವಿರೋಧಿಸುವುದು, ನಮ್ಮವರೆಂದು ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ. ಕರ್ನಾಟಕದ ಮಾನ - ಮರ್ಯಾದೆ ಇಡೀ ದೇಶದಲ್ಲಿ ಈಗಾಗಲೇ ಹರಾಜು ಹಾಕಲಾಗಿದೆ. ಹೀಗೆ ಆದ್ರೆ ಇನ್ನು ಹೆಚ್ಚಾಗುತ್ತೆ. ಡ್ರಗ್​ ಕೇಸ್​ನಲ್ಲಿ ಸಿಲುಕಿದವನ್ನು ಒಳಗೆ ಹಾಕಿದಂತೆ ಈ ಫೇಕ್ ಸಿ.ಡಿ ಮಾಡುವವರ ವಿರುದ್ಧವೂ ಕಠಿಣ ಕ್ರಮ ಆಗಲಿ ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.