ETV Bharat / state

ಭಾಷಣದುದ್ದಕ್ಕೂ ಸಿಎಂ ಗುಣಗಾನ... ಜಿಲ್ಲೆಗಳ ಸಂಖ್ಯೆಯನ್ನೇ ಮರೆತರಾ ಕಟೀಲ್​? - ಬಿಎಸ್​ವೈ ಗುಣಗಾನ ಮಾಡಿದ ಕಟೀಲ್

ಸಿಎಂ ಯಡಿಯೂರಪ್ಪನವರಿಗೆ ಜೈ ಎನ್ನುವ ಮೂಲಕ ಯಾದಗಿರಿಯಲ್ಲಿ ಮಾತನ್ನ ಪ್ರಾರಂಭಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಅವರು​ ಮುಖ್ಯಮಂತ್ರಿ ಅವರು ಗುಲಾಮಗಿರಿ ಸಂಕೇತವಾಗಿದ್ದ ಹೈದ್ರಾಬಾದ್ ಕರ್ನಾಟಕ ಹೆಸರನ್ನ ಬದಲಿಸಿದ್ದಾರೆ. ಅವರಿಗೆ ನನ್ನ ಅಭಿನಂದನೆ ಎಂದು ಬಿಎಸ್​ವೈ ಅವರನ್ನು ಕೊಂಡಾಡಿದರು. ಇದೇ ಸಂದರ್ಭ ಕಟೀಲ್​ ರಾಜ್ಯದಲ್ಲಿನ ಜಿಲ್ಲೆಗಳ ಸಂಖ್ಯೆಯನ್ನು ತಪ್ಪಾಗಿ ಹೇಳಿದ್ದಾರೆ.

ಭಾಷಣದುದ್ದಕ್ಕೂ ಸಿಎಂ ಗುಣಗಾನ... ಜಿಲ್ಲೆಯ ಸಂಖ್ಯೆಯನ್ನೆ ಮರೆತರಾ ಕಟೀಲ್​
author img

By

Published : Oct 17, 2019, 2:07 PM IST

ಯಾದಗಿರಿ: ರಾಜ್ಯ ಅಧ್ಯಯನ, ಕಾರ್ಯಕರ್ತರ ಭೇಟಿ ಹಿನ್ನೆಲೆ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ತಮ್ಮ ಭಾಷಣದುದ್ದಕ್ಕೂ ಬಿಎಸ್​ವೈ ಗುಣಗಾನ ಮಾಡಿದರು.

ಭಾಷಣದುದ್ದಕ್ಕೂ ಸಿಎಂ ಗುಣಗಾನ... ಜಿಲ್ಲೆಗಳ ಸಂಖ್ಯೆಯನ್ನೇ ಮರೆತರಾ ಕಟೀಲ್​?

ಹೌದು, ಸಿಎಂ ಯಡಿಯೂರಪ್ಪನವರಿಗೆ ಜೈ ಎನ್ನುವ ಮೂಲಕ ಮಾತನ್ನ ಪ್ರಾರಂಭಿಸಿದ ಕಟೀಲ್ ಅವರು​ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುಲಾಮಗಿರಿ ಸಂಕೇತವಾಗಿದ್ದ ಹೈದ್ರಾಬಾದ್ ಕರ್ನಾಟಕ ಹೆಸರನ್ನ ಬದಲಿಸಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಎಂದು ಬಿಎಸ್​ವೈ ಅವರನ್ನು ಕೊಂಡಾಡಿದರು.

ಇದೇ ವೇಳೆ ಬಿಜೆಪಿ ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು, ನಾನು ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ರಾಜ್ಯದ ಅಧ್ಯಯನ, ಕಾರ್ಯಕರ್ತರ ಭೇಟಿ ಮಾಡುತ್ತಿದ್ದೇನೆ. ಸಂಘಟನೆ ಅಭಿಯಾನ ಮಾಡುತ್ತಿದ್ದು, ಸದಸ್ಯತ್ವ ನೋಂದಣಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ ಎಂದರು.

ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಪ್ರವಾಸ, ಪಕ್ಷ ಸಂಘಟನೆ ಹಿನ್ನಲೆ ನಾನು ಈಗಾಗಲೇ 31 ಜಿಲ್ಲೆ ಪ್ರವಾಸ ಮುಗಿಸಿದ್ದು, ಇದು 32 ನೇ ಜಿಲ್ಲೆ ಎಂದು ರಾಜ್ಯದಲ್ಲಿನ ಜಿಲ್ಲೆಗಳ ಸಂಖ್ಯೆಯನ್ನು ತಪ್ಪಾಗಿ ಹೇಳಿದ್ದು ಮಾತ್ರ ವಿಪರ್ಯಾಸ.

Intro:Body:

ydr nalin

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.