ETV Bharat / state

Job Alert: ಯಾದಗಿರಿ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ - ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಜಿ

ಗುತ್ತಿಗೆ ಅವಧಿಗೆ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Yadgiri DHFWS Recruitment For various medical Job

author img

By

Published : Jul 25, 2023, 11:39 AM IST

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಯಾದಗಿರಿ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನರ್ಸಿಂಗ್​, ಮೆಡಿಕಲ್​ ಆಫೀಸರ್​ ಸೇರಿದಂತೆ ಒಟ್ಟು 69 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಗುತ್ತಿಗೆ ಅವಧಿ ಮೇರೆಗೆ ನೇಮಕವಾಗುತ್ತಿರುವ ಹುದ್ದೆಗಳಿಗೆ ಈ ಹಿಂದೆ ಅರ್ಜಿ ಸಲ್ಲಿಕೆ ದಿನಾಂಕ ಜುಲೈ 15 ಎಂದು ನಿಗದಿಪಡಿಸಲಾಗಿತ್ತು. ಆದರೆ, ಇದೀಗ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಜುಲೈ 28ರವರೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಗಳ ವಿವರ: ಸ್ತ್ರಿ ಮತ್ತು ಪ್ರಸೂತಿ ರೋಗ ತಜ್ಞರು, ಮಕ್ಕಳ ತಜ್ಞರು, ಎಂಬಿಬಿಎಸ್​ ವೈದ್ಯರು, ಪಿಸಿಷಿಯನ್​, ತಾಲೂಕು ಪ್ರೋಗ್ರಾಂ ಮ್ಯಾನೇಜರ್​​, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ, ವೈದ್ಯಕೀಯ ಅಧಿಕಾರಿಗಳು, ನರ್ಸ್​ ಅಫೀಸರ್​, ಪ್ರಯೋಗಾಲಯ ಸಹಾಯಕರು, ಆಯುಷ್​ ವೈದ್ಯರು, ಆಡಿಯೋಲಾಜಿಸ್ಟ್​​, ಡಯಟ್​​ ಕೌನ್ಸಿಲರ್​, ಸೈಕಿಯಾಟ್ರಿಸ್ಟ್‌,

ದಿನಾಂಕ ವಿಸ್ತರಣೆ ಮಾಡಿದ ಅಧಿಸೂಚನೆ
ದಿನಾಂಕ ವಿಸ್ತರಣೆ ಮಾಡಿದ ಅಧಿಸೂಚನೆ

ವಿದ್ಯಾರ್ಹತೆ ಏನು?: ಹುದ್ದೆಗೆ ಅನುಸಾರವಾಗಿ ಅಭ್ಯರ್ಥಿಗಳು ವೈದ್ಯಕೀಯ ಪದವಿ, ಬಿಎಸ್ಸಿ ನರ್ಸಿಂಗ್​, ಲ್ಯಾಬ್​ ಟೆಕ್ನಿಶಿಯನ್​ ಹುದ್ದೆಗೆ ಪಿಯುಸಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಗರಿಷ್ಠ 40 ರಿಂದ 70 ವರ್ಷ.

ಆಯ್ಕೆ ಹೇಗೆ?: ಕಂಪ್ಯೂಟರ್​ ಸಾಕ್ಷರತಾ ಪರೀಕ್ಷೆ, ಮೆರಿಟ್​ ಪಟ್ಟಿ, ಸಂದರ್ಶನದ ಮೂಲಕ ಆಯ್ಕೆ.

ವೇತನ ಎಷ್ಟು?: ಹುದ್ದೆಗಳಿಗೆ ಅನುಸಾರವಾಗಿ ₹12,679 ರಿಂದ ₹1,30,00 ರೂ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳನ್ನು ಮೆರಿಟ್​ ಕಂ ರೋಸ್ಟರ್​ ವಿಭಾಗದಲ್ಲಿ ನೇರ ಸಂದರ್ಶನ ಮೂಲಕ ಆರಿಸಲಾಗುವುದು. ಎಲ್ಲ ಶೈಕ್ಷಣಿಕ ದಾಖಲೆ, ಜಾತಿ ಪ್ರಮಾಣ ಪತ್ರ, ಅಂಕವೈಕಲ್ಯತೆ ಪ್ರಮಾಣ ಪತ್ರ, ವಿಳಾಸ ದೃಢೀಕರಣ ಸೇರಿದಂತೆ ಅಗತ್ಯ ದಾಖಲಾತಿಗಳ ನಕಲಿ ಮತ್ತು ಮೂಲ ಪ್ರತಿಗಳನ್ನು ತರುವುದು ಕಡ್ಡಾಯ.

ವಿಶೇಷ ಸೂಚನೆ: ಈ ಹುದ್ದೆಗಳಿಗೆ ಕಿಯೋನಿಕ್ಸ್​ ಅಥವಾ ಸರ್ಕಾರಿದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಕಂಪ್ಯೂಟರ್​ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಈ ಪ್ರಮಾಣಪತ್ರ ಸಲ್ಲಿಸದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ: ಜಿಲ್ಲಾ ಆರ್​ಸಿಎಚ್​ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಯಾದಗಿರಿ- 585202. ಅಧಿಕೃತ ಅಧಿಸೂಚನೆ ಮತ್ತು ಇನ್ನಿತರ ಮಾಹಿತಿ ವೀಕ್ಷಣೆಗೆ ಯಾದಗಿರಿ ಜಿಲ್ಲಾಡಳಿತದ ವೆಬ್​ಸೈಟ್ ​​yadgir.nic.inಗೆ ಭೇಟಿ ನೀಡಿ.

ಇದನ್ನೂ ಓದಿ: SSC Sub Inspector Recruitment: 1876 ಸಬ್​ ಇನ್ಸ್​ಪೆಕ್ಟರ್​ ಹುದ್ದೆಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.