ETV Bharat / state

ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಉದ್ಘಾಟನೆ: ರಾಜವಾಳ ಗ್ರಾಮದಲ್ಲಿ ಭಾವಚಿತ್ರ ಮೆರವಣಿಗೆ

author img

By

Published : Sep 27, 2020, 10:39 PM IST

ಹುಣಸಗಿ ತಾಲೂಕಿನ ರಾಜವಾಳ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಉದ್ಘಾಟನೆ ಅಂಗವಾಗಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

Sri Maharshi Valmiki circle
ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಉದ್ಘಾಟನೆ

ಸುರಪುರ: ಹುಣಸಗಿ ತಾಲೂಕಿನ ರಾಜವಾಳ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ಉದ್ಘಾಟನೆ ಅಂಗವಾಗಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಅನೇಕ ಮುಖಂಡರು ಹಾಗೂ ನೂರಾರು ಜನ ಗ್ರಾಮಸ್ಥರು ಭಾಗವಹಿಸಿ ಅದ್ದೂರಿಯಾಗಿ ಮೆರವಣಿಗೆ ನಡೆಸುವುದರ ಜೊತೆಗೆ ಉದ್ಘಾಟನೆಯಲ್ಲಿ ಭಾಗವಹಿಸಿ ಸಂಭ್ರಮಾಚರಣೆ ನಡೆಸಿದರು.

ರಾಜವಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಅರ್ಥ ಉದ್ಘಾಟಿಸಿದ ಗೋಲಪಲ್ಲಿಯ ವಾಲ್ಮೀಕಿ ಗುರುಪೀಠದ ದಾನೇಶ್ವರ ಮಹಾಸ್ವಾಮೀಜಿ ಮಾತನಾಡಿ, ಜಗತ್ತಿಗೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ಕೊಟ್ಟ ಶ್ರೀ ಮಹರ್ಷಿ ವಾಲ್ಮೀಕಿ ಇಡೀ ಜಗತ್ತಿಗೆ ಆದರ್ಶ ಪುರುಷರಾಗಿದ್ದಾರೆ. ಇವರನ್ನು ಎಲ್ಲರೂ ಕೂಡ ನಿತ್ಯವೂ ಸ್ಮರಿಸಬೇಕು. ಅಂತಹ ಮಹಾಪುರುಷನ ವೃತ್ತವನ್ನು ಉದ್ಘಾಟನೆ ಮಾಡುತ್ತಿರುವುದು ನಮ್ಮೆಲ್ಲರ ಪುಣ್ಯವಾಗಿದೆ ಎಂದರು.

ಮುಖಂಡ ವೆಂಕಟೇಶ್ ಬೇಟೆಗರ್ ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿಯವರು ಆದರ್ಶ ಪುರುಷರಾಗಿದ್ದು ರಾಮ, ಕೃಷ್ಣ, ಲಕ್ಷ್ಮಣ ಮುಂತಾದವರ ಆದರ್ಶವನ್ನು ರಾಮಾಯಣದ ಮೂಲಕ ನಮ್ಮೆಲ್ಲರಿಗೂ ತಿಳಿಸಿಕೊಟ್ಟಿದ್ದಾರೆ ಅಂತಹ ಮಹಾಪುರುಷನ ಆದರ್ಶವನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡು ಆಗೋಣ ಎಂದರು.

ಕಾರ್ಯಕ್ರಮದಲ್ಲಿ ಕೊಡೇಕಲ್ಲಿನ ವೆಂಕಟಪ್ಪನಾಯಕ ಜಾಗಿರ್ದಾರ್, ಬಸವರಾಜ ಕಡದರಾಳ, ತಿರುಪತಿ ಕೊಳೂರ, ದುರ್ಗಪ್ಪ ಗೆದ್ದಲಮರಿ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.