ETV Bharat / state

ಮನೆ ಗೋಡೆ ಕುಸಿತ: ಮಡಿಲಲ್ಲಿಟ್ಟುಕೊಂಡು ಕಂದನ ಜೀವ ಉಳಿಸಿದ ಹೆತ್ತಮ್ಮ..! - ಕಂದನ ಜೀವ ಉಳಿಸಿದ ಹೆತ್ತಮ್ಮ

ಮನೆ ಗೋಡೆ ಕುಸಿದು ಬಿದ್ದು, 9 ತಿಂಗಳ ಹೆಣ್ಣು ಮಗು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಹೆತ್ತಮ್ಮ ತನ್ನ ಮಡಿಲಲ್ಲಿ ಮಗುವನ್ನಿಟ್ಟುಕೊಂಡು ಪ್ರಾಣ ಕಾಪಾಡಿದ್ದಾಳೆ.

Home wall collapse in Yadagiri
ಮನೆ ಗೋಡೆ ಕುಸಿತ
author img

By

Published : Jul 24, 2020, 6:55 PM IST

ಯಾದಗಿರಿ: ಮನೆ ಗೋಡೆ ಕುಸಿಯುತ್ತಿದ್ದರೂ ಹೆತ್ತಮ್ಮ ತನ್ನ ಮಡಿಲಲ್ಲಿ ಮಗುವನ್ನು ಇಟ್ಟುಕೊಂಡು, ಅದರ ಜೀವ ಉಳಿಸುವ ಮೂಲಕ ತಾಯಿಯ ಮಮತೆ ಎಂಥಹದ್ದು ಎಂಬುದನ್ನು ಸಾಬೀತು ಮಾಡಿದ್ದಾಳೆ.

ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಮನೆ ಕುಸಿದು 9 ತಿಂಗಳ ಹೆಣ್ಣು ಮಗು, ತಾಯಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಭಾರೀ ಮಳೆಗೆ ಮನೆ ಗೋಡೆ ನೆನೆದು ಶಿಥಿಲಾವಸ್ಥೆಗೆ ತಲುಪಿತ್ತು. ಇಂದು ಗೋಡೆ ಕುಸಿದು ಬಿದ್ದಿದೆ.

ಯಾದಗಿರಿಯಲ್ಲಿ ಮನೆ ಗೋಡೆ ಕುಸಿತ

ಮನೆ ಗೋಡೆಯ ಕಲ್ಲುಗಳು ಬಿದ್ದಿದ್ದು, ತನ್ನ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಮೈಮೇಲೆ ಕಲ್ಲು ಮಣ್ಣು ಬಿದ್ದರೂ ಸಹ ಅದರಿಂದ ವಿಚಲಿತಳಾಗದೇ ತಾಯಿಯು ಮಗುವಿನ ಜೀವ ಉಳಿಸಿದ್ದಾಳೆ.

ಘಟನೆಯಲ್ಲಿ ಮಗು ಹಾಗೂ ತಾಯಿ ಸೇರಿದಂತೆ ನಾಲ್ವರಿಗೆ ಗಾಯಗೊಂಡಿದ್ದು, ಸ್ಥಳೀಯರು ಮಾಹಿತಿ ಅರಿತು ಅವರನ್ನು ರಕ್ಷಿಸಿದ್ದಾರೆ. ನಾಲ್ವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.