ಯಾದಗಿರಿ: ಬಿಟ್ ಕಾಯಿನ್ ಪ್ರಕರಣದ (Karnataka Bitcoin scam case) ಆರೋಪಿ, ಹ್ಯಾಕರ್ ಶ್ರೀಕಿ ವಿದೇಶದಿಂದ ಡ್ರಗ್ಸ್ ತಂದು ಕಾಂಗ್ರೆಸ್ ಮುಖಂಡರ ಮಕ್ಕಳಿಗೆ ಕೊಡುತ್ತಿದ್ದ. ಹೀಗಾಗಿ, ಕಾಂಗ್ರೆಸ್ ಮುಖಂಡರು ಹಾಗೂ ಅವರ ಮಕ್ಕಳೊಡನೆ ಶ್ರೀಕಿಗೆ ಸಂಪರ್ಕವಿತ್ತು. ಅಂದೇ ಆತನನ್ನು ವಿಚಾರಣೆ ಮಾಡಿದ್ದರೆ ಕಾಂಗ್ರೆಸ್‌ನವರ ಬಣ್ಣ ಬಯಲಾಗುತ್ತಿತ್ತು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ( Home Minister Araga Jnanendra) ಆರೋಪಿಸಿದರು.
ವಿಧಾನ ಪರಿಷತ್ ಚುನಾವಣಾ (Council Election ) ಪ್ರಚಾರದ ಹಿನ್ನೆಲೆಯಲ್ಲಿ ಆಯೋಜನೆಗೊಂಡ ಜನ ಸ್ವರಾಜ್ ಸಮಾವೇಶ (Jana Swaraj Convention) ಅಂಗವಾಗಿ, ಶುಕ್ರವಾರ ಸಂಜೆ ಯಾದಗಿರಿ ನಗರದ ವನಿಕೇರಿ ಲೇಔಟ್ನಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ (Youth Congress elections) ಹ್ಯಾಕಿಂಗ್ ಆಗಿತ್ತು. ನಲಪಾಡ್ಗೆ ಸಿಕ್ಕಾಪಟ್ಟೆ ವೋಟಾಗಿತ್ತು. ಮುಂದೇ ಸಿಎಂ ಆಗಬೇಕೆನ್ನುವ ವ್ಯಕ್ತಿಗೆ ಇದರ ಬಗ್ಗೆ ಭಯವಿದೆ. ಹುಚ್ಚು ಹಿಡಿದವರಿಗೆ ಜಗತ್ತೆಲ್ಲಾ ಹುಚ್ಚರ ತರ ಕಾಣುತ್ತೆ ಎಂದು ಗೃಹ ಸಚಿವರಿಗೆ ಹುಚ್ಚು ಹಿಡಿದಿದೆ ಎನ್ನುವ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ: Jan Swaraj Yatra..ಜನಸ್ವರಾಜ್ ಯಾತ್ರೆ ಹೆಸರಲ್ಲಿ ಜಾತ್ರೆ ಮಾಡುವ ಸಮಯ ಇದಲ್ಲ: ಹೆಚ್ಡಿಕೆ ಕಿಡಿ
ಪ್ರಿಯಾಂಕ್ ಖರ್ಗೆ ಆರೋಪದಲ್ಲಿ ಹುರುಳಿಲ್ಲ, ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರಿಯಾಂಕ್ ಖರ್ಗೆ ಏನು ಮಾಡುತ್ತಿದ್ರು. ಪೊಲೀಸ್ ಇಲಾಖೆಯ ಕಾರ್ಯವೈಖರಿ ಅನುಮಾನಿಸುತ್ತಿರುವ ಮೂಲಕ ಇಲಾಖೆಯ ಹೆಸರಿಗೆ ಕಳಂಕ ತರುವಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: 4 ಕೋಟಿಗೂ ಅಧಿಕ ಜನರನ್ನು ತಲುಪಿದ ಬಿಟಿಎಸ್: 5,000 ಕೋಟಿ ರೂ. ಬಂಡವಾಳ ನಿರೀಕ್ಷೆ
ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗಾಂಧಿ ಈ ದೇಶ ರಾಮ ರಾಜ್ಯವಾಗಬೇಕೆಂದಿದ್ರು, ಈ ಪರಿಕಲ್ಪನೆಯನ್ನು ತಂದಿದ್ದು ಬಿಜೆಪಿ ಎನ್ನುವುದನ್ನು ಮರೆಯಬಾರದು. ಗಾಂಧಿ, ಅಂಬೇಡ್ಕರ್ ಹಾಗೂ ಗೋಮಾತೆ ಹೆಸರಿನಲ್ಲಿ ಮತ ಪಡೆದ ಕಾಂಗ್ರೆಸ್ ಪಕ್ಷ, ಮುಂದಿನ ದಿನಗಳಲ್ಲಿ ಮಕ್ತಾಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ. ಹೊಸ ಶಕೆ ಆರಂಭವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Sitharaman to GIFT City: 'ಗಿಫ್ಟ್ ಸಿಟಿ'ಗೆ ಇಂದು ಉನ್ನತ ಅಧಿಕಾರಿಗಳೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಇದೇ ವೇಳೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರಲ್ಲಿ ಮನವಿ ಮಾಡಿದ ಕಟೀಲ್, ಪ್ರತಿ ಸದಸ್ಯರಿಗೆ 10 ಸಾವಿರ ರೂ.ಗಳ ಗೌರವಧನ ಹಾಗೂ ಪಂಚಾಯಿತಿಗೆ 2 ಕೋಟಿ ರೂ.ಗಳ ಅನುದಾನ ನೀಡಲಾಗುವುದು ಎಂದರು. ಜೊತೆಗೆ ವಿವಿಧ ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು ಎಂದರು.