ಸುರಪುರ: ತಾಲೂಕಿನ ದೇವಿಕೆರಾ ಗ್ರಾಮದಲ್ಲಿನ ಕುಟುಂಬವೊಂದರಲ್ಲಿ ಐದು ಜನ ವಿಶೇಷ ಚೇತನರಿಗೆ ಒಡಹುಟ್ಟಿದ ಸಹೋದರಿಯೇ ಆಧಾರವಾಗಿದ್ದು, ಸದ್ಯ ಆ ಕುಟುಂಬದ ಮನೆ ದುರಸ್ತಿ ಕಾರ್ಯ ಆರಂಭಗೊಂಡಿದೆ.
ವಿಶೇಷ ಚೇತನರಿಗೆ ಒಡಹುಟ್ಟಿದ ಸಹೋದರಿಯೇ ಪ್ರಮುಖ ಸ್ಥಾನದಲ್ಲಿದ್ದು, ಸಾಕಿ ಸಲಹುತ್ತಿದ್ದ ಸುದ್ದಿಯೊಂದು ಮೇ.10ರಂದು ವಿಶ್ವ ತಾಯಂದಿರ ದಿನದ ನಿಮಿತ್ತ ಈಟಿವಿ ಭಾರತದಲ್ಲಿ ವಿಶೇಷ ವರದಿ ಪ್ರಸಾರವಾಗಿತ್ತು. ವರದಿಯನ್ನು ವೀಕ್ಷಿಸಿದ ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರು ದೇವಿಕೆರೆ ಗ್ರಾಮದಲ್ಲಿನ ಈ ಕುಟುಂಬಕ್ಕೆ ಭೇಟಿ ನೀಡಿ ಈಟಿವಿ ವರದಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಅದರ ಮುಂದುವರಿದ ಭಾಗವಾಗಿ ಇಂದು ವೀರಶೈವ ಲಿಂಗಾಯಿತ ವೇದಿಕೆಯ ಮುಖಂಡರು ಸಂತ್ರಸ್ತ ಕುಟುಂಬಕ್ಕೆ ಮನೆ ದುರಸ್ತಿಗೊಳಿಸಿಕೊಡುವ ಕಾರ್ಯಕ್ಕೆ ಚಾಲನೆ ನೀಡಿದರು. ಅಲ್ಲದೇ ಈ ಸಂತ್ರಸ್ತ ಕುಟುಂಬಕ್ಕೆ ಪ್ರತೀ ತಿಂಗಳು ಸಹಾಯಧನ ನೀಡುವ ಬಗ್ಗೆ ಭರವಸೆ ನೀಡಿದರು.
ವಿಶ್ವ ತಾಯಂದಿರ ದಿನದ ವಿಶೇಷ.. ಒಡಹುಟ್ಟಿದವರಿಗೆ ತಾಯಿಯಾದ ಸಹೋದರಿ..
ಮನೆ ದುರಸ್ತಿ ಕಾರ್ಯಕ್ಕೆ ಗುದ್ದಲಿ ಪೂಜೆ ನಡೆಸಿಕೊಡುವ ಮೂಲಕ ಕಾರ್ಯಾರಂಭಕ್ಕೆ ಸ್ವಾಮೀಜಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧನ ಸಹಾಯ ಮಾಡಿದ ಗುರು ಮಣಿಕಂಠ ಶಹಪುರ, ಮಂಜುನಾಥ ಜಾಲಹಳ್ಳಿ, ರಂಗನಗೌಡ ದೇವಿಕೇರಾ, ಚಂದ್ರಶೇಖರ್ ಡೋಣೂರ, ಮಂಜುನಾಥ ಗುಳಗಿ ಇತರರಿದ್ದರು.