ಯಾದಗಿರಿ: ಹುಣಸಗಿ ತಾಲೂಕಿನ ಗೆದ್ದಲಮರಿ ನಡುಗಡ್ಡೆಯಲ್ಲಿ ಸಿಲುಕಿದ್ದ ಐದು ಜನರನ್ನು ಜಿಲ್ಲಾಡಳಿತವು ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ.
ಬಸವಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಪರಿಣಾಮ ಕೃಷ್ಣ ನದಿಗೆ ಶನಿವಾರ ರಾತ್ರಿ ಕೆಬಿಜೆಎನ್ಎಲ್ ಅಧಿಕಾರಿಗಳು 6.5ಲಕ್ಷ ಕ್ಯೂಸೆಕ್ ನೀರನ್ನು ಹರಿಸಿದ್ದಾರೆ. ಈ ಹಿನ್ನೆಲೆ ಗೆದ್ದಲಮರಿ ಗ್ರಾಮವು ಜಲವೃತ್ತವಾಗಿ ನಡುಗಡ್ಡೆಯಂತಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಾಚರಣೆ ತಂಡ ಹಾಗೂ ಭಾರತೀಯ ಏರ್ ಫೋರ್ಸ್ ಪಡೆಯಿಂದ ನಡುಗಡ್ಡೆಯಲ್ಲಿ ಸಿಲುಕಿದ್ದ ಐದು ಜನ ಗ್ರಾಮಸ್ಥರನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿದೆ.
ಹಳೆಪ್ಪ, ಹನುಮಂತಿ, ಶಿವು, ದ್ಯಾಮವ್ವ, ಅಯ್ಯಪ್ಪ ನಡುಗಡ್ಡೆಯಲ್ಲಿ ಸಿಲುಕಿದ್ದ ಗೆದ್ದಲಮರಿ ಗ್ರಾಮಸ್ಥರು.