ಗುರುಮಠಕಲ್: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯ ಮತ್ತು ನಾಡ ಕಚೇರಿಯಲ್ಲಿ ಮೂರು ಜನ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಒಟ್ಟು ನಾಲ್ಕು ಜನ ಸಿಬ್ಬಂದಿಗೆ ಸೋಮವಾರದಂದು ಕೊರೊನಾ ಸೋಂಕು ದೃಢಪಟ್ಟಿದ್ದು, ತಹಶೀಲ್ದಾರ್ ಕಚೇರಿ, ಪುರಸಭೆ ಕಾರ್ಯಾಲಯದ ಕಟ್ಟಡ ಹಾಗೂ ನಾಡ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ಸೀಲ್‌ಡೌನ್ ಮಾಡಿದರು.
ಪುರಸಭೆ ಕಾರ್ಯಾಲಯದ ಆವರದಲ್ಲಿರುವ ತಹಶೀಲ್ದಾರ ಕಚೇರಿಯ ಮೂರು ಜನ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಒಟ್ಟು ನಾಲ್ಕು ಜನ ಸಿಬ್ಬಂದಿಗೆ ಸೋಮವಾರದಂದು ಕೊರೋನಾ ದೃಢಪಟ್ಟಿದ್ದು ವರದಿ ಬಂದ ಹಿನ್ನಲೆಯಲ್ಲಿ ತಹಶೀಲ್ದಾರ ಕಚೇರಿ, ಪುರಸಭೆ ಕಾರ್ಯಾಲಯದ ಕಟ್ಟಡ ಹಾಗೂ ನಾಡಕಚೇರಿಯನ್ನು ಸ್ಯಾನಿಟೈಸ್ ಮಾಡಿ ಸೀಲ್‌ಡೌನ್ ಮಾಡಲಾಯಿತು.
ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿಯ ಸಂಪರ್ಕ ಇರುವ ಪುರಸಭೆ ಕಾರ್ಯಾಲಯದಲ್ಲಿನ ಮೀಟಿಂಗ್ ಹಾಲ್, ಮುಖ್ಯಾಧಿಕಾರಿ ಕೋಣೆ ಸೇರಿದಂತೆ ಸಿಬ್ಬಂದಿಯ ಹಲವು ಕೋಣೆಗಳನ್ನು ಸಹ ಬಂದ್ ಮಾಡಲಾಗಿದೆ.
ಜು 10 ರಂದು ಇಲ್ಲಿನ ತಹಶೀಲ್ದಾರ್ ಆಫೀಸ್ ಮತ್ತು ನಾಡಕಚೇರಿ ಸಿಬ್ಬಂದಿಯ ಗಂಟಲ ದ್ರವ ಮಾದರಿಗಳನ್ನು ಪಡೆದು ಸೋಂಕು ಪತ್ತೆಗೆ ಕಳುಹಿಸಲಾಗಿತ್ತು, ಸೋಮವಾರದಂದು ಬಂದ ವರದಿಯಲ್ಲಿ ಮೂರು ಜನ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಒಟ್ಟು 4 ಜನ ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ. ಕೊರೊನಾ ಸೊಂಕು ದೃಢಪಟ್ಟ ಸಿಬ್ಬಂದಿಯನ್ನು ಯಾದಗಿರಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.