ಯಾದಗಿರಿ: ಆನ್ಲೈನ್ನಲ್ಲಿ ವಸ್ತುಗಳು ಖರೀದಿ ಮಾಡುವ ಮುನ್ನ ಹುಷಾರ್..! ಕಡಿಮೆ ದರಕ್ಕೆ ನಿಮಗೆ ವಸ್ತುಗಳ ಸಿಗುತ್ತದೆ ಎಂದು ಬುಕ್ ಮಾಡಿದ್ರೆ ನಿಮಗೆ ಟೋಪಿ ಬೀಳುವುದು ಗ್ಯಾರೆಂಟಿ. ಯಾಕೆಂದರೆ ಜಿಲ್ಲೆಯ ಸರ್ಕಾರಿ ನೌಕರರೊಬ್ಬರಿಗೆ ಆನ್ಲೈನ್ ಅಮೆಜಾನ್ ಕಂಪನಿಯಿಂದ ಮಹಾಮೋಸವೇ ನಡೆದಿದೆ.
ಹೌದು, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದ ಶರಣಗೌಡ ಎಂಬುವವರು ಮೋಸಕ್ಕೆ ಒಳಗಾದ ವ್ಯಕ್ತಿ. ಇವರು ಯಾದಗಿರಿಯ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ, ಯಾದಗಿರಿ ಜಿಲ್ಲೆಯ ಅಂಗಡಿಗಳಲ್ಲಿ ವ್ಯಾಕ್ಯೂಮ್ ಕ್ಲಿನರ್ ಇಲ್ಲದ ಕಾರಣ ಅಮೆಜಾನ್ ಕಂಪನಿಯಲ್ಲಿ ಇದೇ ಡಿ.22 ರಂದು ₹11990 ಮೌಲ್ಯದ ವ್ಯಾಕ್ಯೂಮ್ ಕ್ಲಿನರ್ ಅನ್ನು ಆನ್ಲೈನ್ನ ಅಮೆಜಾನ್ ಕಂಪನಿಯಲ್ಲಿ ಬುಕ್ ಮಾಡಿದ್ದಾರೆ. ಆದ್ರೆ, ಕಂಪನಿ ಕಳುಹಿಸಿದ್ದು ಮಾತ್ರ ಖಾಲಿ ಡಬ್ಬಾ.. ವ್ಯಾಕ್ಯೂಮ್ ಕ್ಲಿನರ್ ಬದಲು ಖಾಲಿ ಡಬ್ಬಾ ಜೊತೆ ರಟ್ಟುಗಳು ಬಂದಿವೆ.
ಅದೇ ರೀತಿ, ಕೆಲ ವ್ಯಾಕ್ಯೂಮ್ ಕ್ಲಿನರ್ನ ಪರಿಕರಗಳನ್ನು ಕಳುಹಿಸಿದ್ದಾರೆ. ವ್ಯಾಕ್ಯೂಮ್ ಕ್ಲಿನರ್ ಇಲ್ಲದೇ ಡಬ್ಬಾ ಕಳುಹಿಸಿ ಕಂಪನಿ ಮೋಸ ಮಾಡಿದೆ ಎಂದು ಶರಣಗೌಡ ಅಮೆಜಾನ್ ಸೈಟ್ನಲ್ಲಿ ದೂರು ಸಲ್ಲಿಸುವುದರ ಜೊತೆಗೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.