ಯಾದಗಿರಿ : ಭೀಮಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಯುವಕರು ನಾಪತ್ತೆಯಾಗಿರುವ ಘಟನೆ ಯಾದಗಿರಿ ಹೊರವಲಯದ ಗುರುಸಣಗಿ ಬ್ರಿಡ್ಜ್ ಬಳಿ ನಡೆದಿದೆ.
ಯುವಕರ ಗುಂಪೊಂದು ಗುರಸಣಗಿ ಬ್ರಿಡ್ಜ್ ಬಳಿಯ ಭೀಮಾ ನದಿಗೆ ಈಜಲು ತೆರಳಿತ್ತು. ಈಜಲು ಹೋದ ಐವರಲ್ಲಿ ಎಂ ಡಿ ಅಬ್ದುಲ್ ಎಂಬಾತನನ್ನು ನದಿ ದಡದಲ್ಲಿ ನಿಲ್ಲಿಸಿ, ಉಳಿದ ನಾಲ್ವರು ನದಿಗೆ ಇಳಿದಿದ್ದರು. ಈ ವೇಳೆ ನೀರಿನಲ್ಲಿ ಆಯತಪ್ಪಿ ಯಾದಗಿರಿಯ ಅಮಾನ್ (16), ಅಯಾನ್ (16), ರೆಹಮಾನ್ (16) ಹಾಗೂ ಕಲಬುರಗಿ ಮೂಲದ ರೆಹಮಾನ್ (15) ಎಂಬುವರು ಮುಳುಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಋಷಿಕೇಶ್ ಸೋನವಣೆ, ಎಡಿಸಿ ಪ್ರಕಾಶ್ ರಜಪೂತ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ಚುರುಕುಗೊಂಡಿದೆ.