ETV Bharat / state

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ: ಪ್ರಿಯಾಂಕ ಖರ್ಗೆ - ಕಾಂಗ್ರೆಸ್ ಕಾರ್ಯಕರ್ತರ ಸಭೆ

ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಷ್ಟು ಲಜ್ಜೆಗೆಟ್ಟಿದೆ ಎಂದರೆ ಕೊರೊನಾ ಸೋಂಕಿತರ ಹೆಣದ ಮೇಲೆ ಹಣ ಮಾಡಿದರು. ಇದರಿಂದ ರಾತ್ರಿ ವೇಳೆ ಟಿವಿ ಪರದೆ ಮೇಲೆ ಬರುವ ಮೋದಿಯನ್ನು ಕಂಡರೆ ಜನರು ಗಾಬರಿಯಾಗುವಂತಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹರಿಹಾಯ್ದರು.

Former Minister Priyanka Kharg
ಮಾಜಿ ಸಚಿವ ಪ್ರಿಯಾಂಕ ಖರ್ಗೆ
author img

By

Published : Dec 23, 2020, 3:07 PM IST

Updated : Dec 23, 2020, 3:32 PM IST

ಗುರುಮಠಕಲ್ (ಯಾದಗಿರಿ): ಬಿಜೆಪಿಯವರು ಕೇವಲ ಅಧಿಕಾರಕ್ಕಾಗಿ ಕಿತ್ತಾಡುತ್ತಾರೆ. ಆಪರೇಶನ್ ಕಮಲ, ಮೂವರು ಮುಖ್ಯಮಂತ್ರಿಗಳು.. ಹೀಗೆ ಸರ್ಕಾರದ ಜವಾಬ್ದಾರಿ ಯಾರು ನಿಭಾಯಿಸುತ್ತಿದ್ದಾರೆ ಎನ್ನುವುದೇ ಅಲ್ಲಿ ಗೊಂದಲಮಯವಾಗಿದೆ. ಹಾಗಾಗಿ, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮಾತ್ರ ಅಭಿವೃದ್ದಿ ಕೆಲಸಗಳಾಗಲು ಸಾಧ್ಯ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಮಾಜಿ ಸಚಿವ ಪ್ರಿಯಾಂಕ ಖರ್ಗೆ

ಗುರುಮಠಕಲ್ ಪಟ್ಟಣ ಕಾಂಗ್ರೆಸ್ ಪಕ್ಷದ ಕಚೇರಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಆರ್‌ಟಿಐ, ಆರ್‌ಟಿಎ, ಆರ್‌ಟಿಎಫ್, ಆಂಬುಲೆನ್ಸ್, ಆಹಾರ ಭದ್ರತೆ, ಕೃಷಿ ಸಾಲಮನ್ನಾ ಇವೆಲ್ಲಾ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಈಗಿನ ಬಿಜೆಪಿ ಅಲ್ಲ ಎಂದರು.

ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಈ ಭಾಗದ ಕೂಲಿ ಕಾರ್ಮಿಕರನ್ನು ವಾಪಸ್ ಕರೆತರಲು ಅವರಿಂದ ಎರಡು ಪಟ್ಟು ದುಡ್ಡು ವಸೂಲಿ ಮಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ರೈತರ, ಕೂಲಿ ಕಾರ್ಮಿಕರ ಆದಾಯ ದುಪ್ಪಟ್ಟು ಮಾಡುವುದಾಗಿ ವಾಗ್ದಾನ ಮಾಡಿದ ಮೋದಿ ಅವರಿಗೆ, ದಿಲ್ಲಿಯಲ್ಲಿ ನಡೆಯುತ್ತಿರುವ ಸಾವಿರಾರು ರೈತರನ್ನು ಭೇಟಿ ಮಾಡಲು ಸಮಯವಿಲ್ಲ ಎಂದು ಹರಿಹಾಯ್ದರು.

ಕಲ್ಯಾಣ ಕರ್ನಾಟಕದ ಭಾಗದ ಶಾಸಕರಲ್ಲಿ ಒಬ್ಬರೇ ಮಂತ್ರಿಯಾಗಿದ್ದು, ಅದು ಪ್ರಭು ಚವ್ಹಾಣ್​. ಅವರಿಗೆ ಕನ್ನಡ, ಹಿಂದಿ, ಇಂಗ್ಲಿಷ್ ಸೇರಿ ಯಾವ ಭಾಷೆಯೂ ಸರಿಯಾಗಿ ಬರಲ್ಲ ಎಂದು ಪ್ರಿಯಾಂಕ ಖರ್ಗೆ ಟೀಕಿಸಿದರು.

Last Updated : Dec 23, 2020, 3:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.