ETV Bharat / state

ಕೊರೊನಾಕ್ಕೆ ಬಲಿಯಾದ ಮಾಜಿ ಸಚಿವರ ಅಂತ್ಯಕ್ರಿಯೆ: ರಾಜಾ ಮದನಗೋಪಾಲ ಒಡನಾಟ ನೆನೆದ ಆಪ್ತರು - Former Minister dead for corona

ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ಕೊರೊನಾ ವೈರಸ್​​ಗೆ ಒಳಗಾಗಿ ಚಿಕಿತ್ಸೆಗೆ ಸ್ಪಂದಿಸದೆ ಜುಲೈ 27ರಂದು ಕೊನೆಯುಸಿರೆಳೆದರು. ಇಂದು ಅವರ ಅಂತ್ಯಕ್ರಿಯೆ ನಡೆಯಿತು.

Former Minister Raja Madangopala nayaka
ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ
author img

By

Published : Jul 28, 2020, 6:51 PM IST

ಸುರಪುರ: ನಗರದ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಸಿಕೊಳ್ಳುತ್ತಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ಕೊರೊನಾ ವೈರಸ್​​ಗೆ ನಿನ್ನೆ ಮೃತಪಟ್ಟರು. ಅವರ ಅಂತ್ಯಕ್ರಿಯೆ ಶೆಳ್ಳಗಿ ಗ್ರಾಮದಲ್ಲಿ ನಡೆಯಿತು.

ಮೂರು ಬಾರಿ ಶಾಸಕರಾಗಿ ಹಾಗೂ ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡರು. ಸಚಿವರಾದ ಸಂದರ್ಭದಲ್ಲಿ ಮಾಡಿದ ಸುರಪುರದ ಎಪಿಎಂಸಿ ಗಂಜ್ ಹಾಗೂ ಸುರಪುರ ನಗರಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಜಲ ಶುದ್ಧೀಕರಣ ಘಟಕ ಆರಂಭಿಸಿದ್ದು, ಇಂದಿಗೂ ಸಾಕ್ಷಿಯಾಗಿದೆ.

ರಾಜಕಾರಣಿ ಮಾತ್ರವಲ್ಲದೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು. ಸುರಪುರದಲ್ಲಿ ಗರುಡಾದ್ರಿ ಕಲಾ ಮಂದಿರವನ್ನು ನಿರ್ಮಿಸುವ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಉತ್ತೇಜಿಸಿದ್ದರು. ಅಲ್ಲದೆ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‌ ಸ್ಥಾಪಿಸಿ ಅನೇಕರೊಂದಿಗೆ ಒಡನಾಟ ಬೆಳೆಸಿಕೊಂಡಿದ್ರು.

ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಕುರಿತು ಅಭಿಪ್ರಾಯ

2015ರಲ್ಲಿ ಗರುಡಾದ್ರಿ ಕಲಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದರು. ಅನೇಕ ಕೃತಿಗಳನ್ನು ಹೊರತರಲು ಸಹಾಯ ಮಾಡುವ ಮೂಲಕ ಸಾಹಿತಿಗಳಿಗೆ ಉತ್ತೇಜನ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹಾಕಿ ಕ್ರೀಡಾಪಟುವಾಗಿದ್ದರು.

ರಾಜಾ ಮದನಗೋಪಾಲ ನಾಯಕ ಅವರಿಗೆ ಜುಲೈ 23ರಂದು ಕೊರೊನಾ ಸೊಂಕು ತಗುಲಿತ್ತು. ಬಳಿಕ ಅವರು ಕಲಬುರಗಿಯ ಇಎಸ್ಐ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಜುಲೈ 27ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಅಂತಿಮ ವಿಧಿವಿಧಾನಗಳನ್ನು ರಾಜ ಮನೆತನದ ಸಂಪ್ರದಾಯದಂತೆ ಅವರ ಶೆಳ್ಳಗಿ ಗ್ರಾಮದ ಬಳಿಯ ಜಮೀನಿನಲ್ಲಿ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.