ETV Bharat / state

ಯಾವ ಕ್ಷಣದಲ್ಲಾದ್ರೂ ಮೈತ್ರಿ ಸರ್ಕಾರ ಬೀಳಬಹುದು: ಶೆಟ್ಟರ್​​​​​ - kannada news

ರಾಜ್ಯದಲ್ಲಿ ಮೈತ್ರಿ ಸರ್ಕಾರ ಯಾವ ಕ್ಷಣದಲ್ಲಿಯಾದರೂ ಪತನವಾಗಬಹುದು ಎಂದು ಮಾಜಿ ಸಿಎಂ ಜಗದೀಶ್​​ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ಮಾಜಿ ಸಿ ಎಂ ಜಗದೀಶ್ ಶೆಟ್ಟರ್ರಿಂದ ಭವಿಷ್ಯ
author img

By

Published : Jun 11, 2019, 8:45 PM IST

ಯಾದಗಿರಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಯಾವ ಕ್ಷಣದಲ್ಲಿಯಾದರೂ ಪತನವಾಗಬಹುದು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಯಾವ ಕ್ಷಣದಲ್ಲಿಯಾದರೂ ಪತನವಾಗಬಹುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅತಿ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಹೊಂದಿದೆ. ಜನರೇ ನಮ್ಮಗೆ ಸರ್ಕಾರ ರಚನೆ ಮಾಡಿ ಎಂದು ಹೇಳುತ್ತಿದ್ದಾರೆ. ಆದರೆ ಯಾವ ಸಮಯದಲ್ಲಿ ಸರ್ಕಾರ ರಚನೆಯಾಗುತ್ತೆ ಎನ್ನುವುದು ಗೊತ್ತಿಲ್ಲ. ಅತಿ ಶೀಘ್ರದಲ್ಲಿ ಮೈತ್ರಿ ಸರ್ಕಾರ ಪತನವಾಗಲಿದ್ದು, ಬಿಜೆಪಿ ಪಕ್ಷವು ಅಧಿಕಾರ ಗದ್ದುಗೆ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್​​

ಬಳ್ಳಾರಿಯ ಜಿಂದಾಲ್​​ ಕಂಪನಿಗೆ ಭೂಮಿ ಪರಭಾರೆ ಮಾಡುವ ಕುರಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಜಿಂದಾಲ್​​ ಕಂಪನಿಗೆ ಜಮೀನು ನೀಡಲಾಗಿದೆ. ಆದರೆ ಸರ್ಕಾರ ಒಂದು ಲಕ್ಷ ರಾಪಾಯಿ ಕಡಿಮೆ ದರದಲ್ಲಿ ರೈತರ ಭೂಮಿಯನ್ನು ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮೈತ್ರಿ ಸರ್ಕಾರ ಜಿಂದಾಲ್​​ ಕಂಪನಿಯವರಿಂದ ಕೋಟ್ಯಂತರ ರೂಪಾಯಿ ಡೀಲ್ ಮಾಡಿಕೊಕೊಳ್ಳುತ್ತಿದೆ ಎಂದು ಆರೋಪಿಸಿದರು.

ಸಿಎಂ ಗ್ರಾಮ ವಾಸ್ತವ್ಯ ಒಂದು ನಾಟಕ:

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುವ ಮುಖಾಂತರ ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು. ಸಿಎಂ ಕುಮಾರಸ್ವಾಮಿ ರೈತರನ್ನು ಮೂರ್ಖರನ್ನಾಗಿಸಲು ಹೊರಟಿದ್ದು, ರೈತರು ಮುರ್ಖರಲ್ಲ. ನಿಮಗೆ ರೈತಪರ ಕಾಳಜಿಯಿದ್ದರೆ ರೈತರ ಸಾಲ ಮನ್ನಾ ಮಾಡಿ. ಅದನ್ನು ಬಿಟ್ಟು ಹೈಡ್ರಾಮಾ ಮಾಡುವುದನ್ನು ನಿಲ್ಲಿಸಿ ಎಂದು ಶೆಟ್ಟರ್​​ ಗುಡುಗಿದರು.

Intro:ಸ್ಥಳ : ಯಾದಗಿರಿ
ಫಾರ್ಮೆಟ: ಎ ವಿ
ಸ್ಲಗ್ : ಮಾಜಿ ಸಿ ಎಂ ಜಗದೀಶ ಮೈತ್ರಿ ಸರಕಾರದ ವಿರುದ್ಧ ಆಕ್ರೋಶ.

ನಿರೂಪಕ : ಕರ್ನಾಟಕದಲ್ಲಿ ರಾಜ್ಯದಲ್ಲಿ ಮೈತ್ರಿ ಸರಕಾರ ಯಾವ ಕ್ಷಣದಲ್ಲಿಯಾದರೂ ಪತನವಾಗಬಹುದು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಅವರು ರಾಜ್ಯ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೇಡಿಎಸ್ ಮೈತ್ರಿ ಸರಕಾರವು ಯಾವು ಕ್ಷಣದಲ್ಲಿಯಾದರೂ ಪತನವಾಗಬಹುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಪಕ್ಷವು ಅತಿ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಹೊಂದಿದೆ. ಜನರೆ ನಮ್ಮಗೆ ಸರಕಾರ ರಚನೆ ಮಾಡಿ ಎಂದು ಹೇಳುತ್ತಿದ್ದಾರೆ. ಆದ್ರೆ ಯಾವ ಸಮಯದಲ್ಲಿ ಸರಕಾರ ರಚನೆಯಾಗುತ್ತೆ ಎನ್ನುವುದು ಗೊತ್ತಿಲ್ಲ ,ಆದ್ರೆ ಅತಿ ಶೀಘ್ರದಲ್ಲಿ ಮೈತ್ರಿ ಸರಕಾರ ಪತನವಾಗಲಿದ್ದು ಬಿಜೆಪಿ ಪಕ್ಷವು ಅಧಿಕಾರ ಗದ್ದುಗೆ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.

Body:ಬಳ್ಳಾರಿ ಜಿಂದಾಳ ಕಂಪನಿಗೆ ಭೂಮಿ ಪರಭಾರೆ ಮಾಡುವ ಕುರಿತು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಲೆ ಜಿಂದಾಳ ಕಂಪನಿಗೆ ಜಮೀನ ನೀಡಲಾಗಿದೆ. ಆದ್ರೆ ಸರಕಾರ ಒಂದು ಲಕ್ಷ ರಾಪಾಯಿ ಕಡಿಮೆ ದರದಲ್ಲಿ ರೈತರ ಭೂಮಿಯನ್ನು ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಯಾದಗಿರಿ ಜಿಲ್ಲೆಯ ಮೈತ್ರಿ ಸರಕಾರವು ಜಿಂದಾಳ ಕಂಪನಿಯವರಿಂದ ಸರಕಾರ ಕಿಕಪ್ಯಾಕ ಪಡೆದುಕೊಂಡಿದೆ. ಕೋಟ್ಯಾಂತರ ರೂಪಾಯಿ ಡೀಲ ಮಾಡಿಕೊಕೊಳ್ಳುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Conclusion:ಸಿ ಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡುವ ಮುಖಾಂತರ ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು. ಸಿ ಎಂ ಕುಮಾರಸ್ವಾಮಿ ರೈತರನ್ನು ಮೂರ್ಖರನ್ನು ಮಾಡಲು ಹೊರಟ್ಟಿದ್ದು ರೈತರು ಮುರ್ಖರಲ್ಲ. ನೀವು ರೈತಪರ ಕಾಳಜಿಯಿದ್ದರೆ ರೈತರ ಸಾಲ ಮನ್ನಾ ಮಾಡಿ ಅದನ್ನು ಬಿಟ್ಟು ಹೈಡ್ರಾಮ ನಾಟಕ ಮಾಡುವುದನ್ನು ನಿಲ್ಲಿಸಿ ಎಂದು ಜಗದೀಶ ಶೆಟ್ಟರ ಗುಡುಗಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.