ETV Bharat / state

ಆಸ್ಪತ್ರೆ, ಪುರಸಭೆ ಸಿಬ್ಬಂದಿಗೆ ಆಹಾರ ಪೊಟ್ಟಣ ವಿತರಣೆ - ಆಸ್ಪತ್ರೆ, ಪುರಸಭೆ ಸಿಬ್ಬಂದಿಗಳಿಗೆ ಆಹಾರ ಪೊಟ್ಟಣ ವಿತರಣೆ

ಯಾದಗಿರಿಯ ಗುರುಮಠಕಲ್ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ, ಪುರಸಭೆ ಸಿಬ್ಬಂದಿಗೆ ಡಾ.ಮೈತ್ರಿ ಕುಟುಂಬದಿಂದ ಆಹಾರ ಪೊಟ್ಟಣ ವಿತರಿಸಲಾಯಿತು.

Food distribution in yadagiri
ಆಸ್ಪತ್ರೆ, ಪುರಸಭೆ ಸಿಬ್ಬಂದಿಗಳಿಗೆ ಆಹಾರ ಪೊಟ್ಟಣ ವಿತರಣೆ
author img

By

Published : Apr 25, 2020, 5:25 PM IST

ಗುರುಮಠಕಲ್: ಮನುಷ್ಯ ಜೀವನದಲ್ಲಿ ಎಷ್ಟೇ ಸಾಧನೆ ಮಾಡಲಿ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿರಬೇಕು ಎಂದು ಖಾಸಾಮಠದ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಗಳು ಅಭಿಪ್ರಾಯ ಪಟ್ಟರು.

ಆಸ್ಪತ್ರೆ, ಪುರಸಭೆ ಸಿಬ್ಬಂದಿಗೆ ಆಹಾರ ಪೊಟ್ಟಣ ವಿತರಣೆ

ಶನಿವಾರ ಪಟ್ಟಣದಲ್ಲಿ ಅನ್ನದಾನ ಕಾರ್ಯದಲ್ಲಿ ಡಾ.ವಿ.ಸಿ.ಮೈತ್ರಿ ಕುಟುಂಬದ ಸೇವೆಯನ್ನು ಶ್ಲಾಘಿಸಿ ಮಾತನಾಡಿದ ಅವರು, ವೈದ್ಯ ವೃತ್ತಿಯಲ್ಲಿ ಡಾ.ಮೈತ್ರಿಯವರು ದಶಕಗಳಿಂದ ಯಾವುದೇ ಜಾತಿ-ಮತ ನೋಡದೇ ವೈದ್ಯ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊರೊನಾ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ಅನ್ನದಾನ ಸೇವೆ ಸಲ್ಲಿಸುತ್ತಿರುವುದು ಅವರ ಮಾನವೀಯ ಸಂಸ್ಕಾರ ತೋರಿಸುತ್ತದೆ ಎಂದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ, ಪುರಸಭೆಯ ಸಿಬ್ಬಂದಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು. ಪಟ್ಟಣದ ವಿವಿಧ ವಾರ್ಡ್​ಗಳಲ್ಲಿ ಸುಮಾರು 200 ಕುಟುಂಬಗಳಿಗೆ ಅನ್ನದಾನ ಮಾಡಲಾಯಿತು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ. ಡಾ.ಶಿವ ಪ್ರಸಾದ ಮೈತ್ರಿ, ರಾಜ್ಯ ಪರಿಷತ್ ಸದಸ್ಯ ಸಂತೋಷ ನೀರಟ್ಟಿ, ಉದ್ಯಮಿ ವೀರಣ್ಣ ಬೇಲಿ, ನರಸರೆಡ್ಡಿ ಗಡ್ಡೆಸೂಗೂರ, ಬಿಜೆಪಿ ಮುಖಂಡ ಕೆ.ದೇವದಾಸ, ಶಿವಯೋಗಿ, ಎಸ್.ಪಿ ಮಹೇಶ್ ಗೌಡ,ಹಾಗೂ ಖಾಸಾಮಠದ ಸಿಬ್ಬಂದಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.