ಯಾದಗಿರಿ: ಕೃಷ್ಣ ಹಾಗೂ ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದು, ಜಿಲ್ಲಾಡಳಿತ ಪ್ರವಾಹದಲ್ಲಿ ಸಿಲುಕಿಕೊಂಡ ಸಂತ್ರಸ್ತರ ರಕ್ಷಣೆಗೆ ಹರಸಾಹಸ ಪಡುತ್ತಿದೆ.
ಯಾದಗಿರಿಯಾದ್ಯಂತ ಕೃಷ್ಣ ಹಾಗೂ ಭೀಮಾ ನದಿಯ ಪ್ರವಾಹ ಎಲ್ಲಾ ತಾಲೂಕುಗಳಿಗೂ ಚುರುಕು ಮುಟ್ಟಿಸಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದ್ದರೂ, ಕೃಷ್ಣ ಹಾಗೂ ಭೀಮೆಯ ಪ್ರವಾಹದಿಂದ ಹಲವು ಗ್ರಾಮಗಳು ಮುಳುಗಡೆಯಾಗಿವೆ.
ಸುರಪುರ ತಾಲೂಕಿನ ಹೆಮ್ಮಡಗಿ, ಸೂಗರೂ, ಶೆಳ್ಳಗಿ , ನೀಲಕಂಠರಾಯನ ಗಡ್ಡಿ ಹೇಮನೂರ, ಶಹಾಪುರ ತಾಲೂಕಿನ ಕೊಳ್ಳೂರ, ಮರಕಲ್, ಗವಬಡೂರ, ಯಾದಗಿರಿ ತಾಲೂಕಿನ ಗೂಗಲ್ಲ, ಕೌಳೂರ ಹೀಗೆ ಹಲವಾರು ಗ್ರಾಮಗಳು ಜಲಾವೃತವಾಗಿವೆ.
ಜಿಲ್ಲೆಯಾದ್ಯಂತ ಸಹಾಯವಾಣಿ ಹಾಗೂ ಗಂಜಿ ಕೇಂದ್ರಗಳನ್ನ ತೆಗೆಯಲಾಗಿದ್ದು, ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ಮುಂದುವರೆದಿದೆ.