ಯಾದಗಿರಿ: ಮುಂಜಾನೆಯಿಂದ ಸಂಜೆತನಕ ಕುಂತರೂ ಅಧಿಕಾರಿಗಳು ನಮನ್ನ ಕೇರ್ ಮಾಡುತ್ತಿಲ್ಲ ಎಂದು ಆರೋಪಿಸಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ರೈತ ಸಂಪರ್ಕ ಕೇಂದ್ರದಲ್ಲಿ ನಡೆದಿದೆ.
ಕೃಷಿ ಅಧಿಕಾರಿ ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ? ಅವನ ಮುಖವು ನೋಡಿಲ್ಲ. ಮುಂಜಾನೆಯಿಂದ ಗೊಬ್ಬರ, ಬೆಳೆಗೆ ಸಿಂಪಡಿಸುವ ಎಣ್ಣೆ ಸರಕಾರದ ಗಾಡಿಯಲ್ಲಿ ಬರುತ್ತಿವೆ ಎಂದು ಸುಳ್ಳಿನಕಂತೆ ಕಟ್ಟುತ್ತಿದ್ದಾರೆ ಹೊರತು ಎಣ್ಣೆ, ಬೀಜ ಬಂದಿಲ್ಲ ಎಂದು ರೈತರು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.
ಅಷ್ಟೇ ಅಲ್ಲದೆ, ರೈತ ಅಧಿಕಾರಿ ಯಲ್ಲಪ್ಪ ರೈತರಿಗೆ ಬೀಜ ಗೊಬ್ಬರ ಸಬ್ಸಿಡಿ ಹಣದಲ್ಲಿ ನೀಡದೆ ಪೂರ್ಣ ಶುಲ್ಕದ ಹಣವನ್ನು ಪಡೆದಕೊಂಡು ರೈತರಿಗೆ ಮೋಸ ಎಸಗುತ್ತಿದ್ದಾರೆ ಎಂದು ದೂರಿದರು.
ಇನ್ನೂ ಸಂಜೆ ಮುಳುಗುತ್ತ ಬಂದರೂ ಯಾವೊಬ್ಬ ಅಧಿಕಾರಿ ರೈತ ಸಂಪರ್ಕ ಕೇಂದ್ರಕ್ಕೆ ಬಾರದೆ ರೈತರ ಕಣ್ಣೀರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತರು ಕೃಷಿ ಇಲಾಖೆಗೆ ಹಿಡಿ ಶಾಪ ಹಾಕಿದರು.