ETV Bharat / state

ಮೈದುನನೊಂದಿಗೆ ವಿವಾಹೇತರ ಸಂಬಂಧ: ನೀರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತಿ ಕೊಲ್ಲಲು ಯತ್ನಿಸಿದ ಪತ್ನಿ ಅರೆಸ್ಟ್​

ನೀರಿನಲ್ಲಿ ನಿದ್ರೆ ಮಾತ್ರೆ ಬೆರಸಿ ದೇವರ ಪ್ರಸಾದವೆಂದು ನಂಬಿಸಿ ಪತಿಗೆ ಕೊಟ್ಟು ಕೊಲೆ ಮಾಡಲು ಯತ್ನಿಸಿದ ಪತ್ನಿ ಹಾಗೂ ಆಕೆಯ ಜೊತೆ ವಿವಾಹೇತರ ಸಂಬಂಧ(extra marital affair) ಹೊಂದಿದ್ದ ಮೈದುನನ್ನು ಕೆಂಭಾವಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಸನಗೌಡ
yadagir
author img

By

Published : Nov 22, 2021, 12:18 PM IST

ಯಾದಗಿರಿ : ದೇವರ ಪ್ರಸಾದವೆಂದು ನಂಬಿಸಿ ಪತಿಗೆ ನಿದ್ರೆ ಮಾತ್ರೆ ಕೊಟ್ಟು ಕೊಲೆ ಮಾಡಲು ಯತ್ನಿಸಿದ ಪತ್ನಿ ಹಾಗೂ ಮೈದುನನನ್ನು (ತಂಗಿಯ ಪತಿ) ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಾಳ್ ಗ್ರಾಮದಲ್ಲಿ ನಡೆದಿದೆ.

ಹೂವಿನಾಳ ಗ್ರಾಮದ ವಿಶ್ವನಾಥರೆಡ್ಡಿ ಎಂಬುವರಿಗೆ ಶಹಾಪುರದ ಚಂದ್ರಕಲಾ ಎಂಬಾಕೆಯೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ 5 ತಿಂಗಳ ಗಂಡು ಮಗು ಕೂಡ ಇದೆ. ಆದರೆ, ಚಂದ್ರಕಲಾ ತನ್ನ ತಂಗಿಯ ಗಂಡ, ಗುರುಮಠಕಲ್ ತಾಲೂಕಿನ ಬಸನಗೌಡ ಎಂಬುವನೊಂದಿಗೆ ವಿವಾಹೇತರ ಸಂಬಂಧ(extra marital affair) ಹೊಂದಿದ್ದಳು. ಇಬ್ಬರೂ ಸೇರಿ ವಿಶ್ವನಾಥರೆಡ್ಡಿ ಕೊಲೆ ಮಾಡಲು ಸಂಚು ನಡೆಸಿದ್ದರು ಎನ್ನಲಾಗ್ತಿದೆ.

ಕುಟುಂಬಸ್ಥರ ಕೈಗೆ ಸಿಕ್ಕಿ ಬಿದ್ದ ಆರೋಪಿ ಬಸನಗೌಡ

ಪ್ರಕರಣ ಹಿನ್ನೆಲೆ:

ನ.18 ರಂದು ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ನಡೆದ ಬಸವೇಶ್ವರ ಜಾತ್ರೆಗೆ ಚಂದ್ರಕಲಾ, ಪತಿ ವಿಶ್ವನಾಥರೆಡ್ಡಿ ಆಗಮಿಸಿದ್ದರು. ಈ ವೇಳೆ ಬಸನಗೌಡನನ್ನು ಭೇಟಿಯಾದ ಚಂದ್ರಕಲಾ, ಮಗುವಿಗೆ ಔಷಧಿ ಕಳುಹಿಸುವಂತೆ ಹೇಳಿದ್ದಾಳೆ. ಆಗ ಬಸನಗೌಡ ಮಗುವಿನ ಔಷಧಿ ಜೊತೆ ನಿದ್ದೆ ಮಾತ್ರೆ ನೀಡಿದ್ದಾನೆ. ರಾತ್ರಿ ಚಂದ್ರಕಲಾ ನೀರಿಗೆ ಮಾತ್ರೆಗಳನ್ನು ಬೆರೆಸಿ ದೇವರ ಪ್ರಸಾದವೆಂದು ಪತಿ ವಿಶ್ವನಾಥ ರೆಡ್ಡಿಗೆ ನೀಡಿದ್ದಾಳೆ.

ಇದನ್ನೂ ಓದಿ: ಕಾರು - ಬೈಕ್ ಡಿಕ್ಕಿ: ಮೈಸೂರಲ್ಲಿ ಸಹೋದರರಿಬ್ಬರ ದಾರುಣ ಸಾವು

ಇದನ್ನು ಕುಡಿಯಲು ಹೋದ ವಿಶ್ವನಾಥ, ಕಹಿ ಎಂದು ಸ್ವಲ್ಪ ಮಾತ್ರ ಕುಡಿದು ಉಳಿದಿದ್ದನ್ನು ಚೆಲ್ಲಿದ್ದಾರೆ. ಆದರೆ, ಎಲ್ಲ ಔಷಧಿ ಕುಡಿದಿದ್ದಾರೆಂದು ನಂಬಿದ್ದ ಚಂದ್ರಕಲಾ, ಬಸನಗೌಡಗೆ ಮಧ್ಯರಾತ್ರಿ ಫೋನ್​ ಮಾಡಿ ಮನೆಗೆ ಬರುವಂತೆ ಸೂಚಿಸಿದ್ದಾಳೆ. ಈ ವೇಳೆ ಇಬ್ಬರೂ ಸೇರಿ ಕುತ್ತಿಗೆ ಹಿಸುಕಲು ಮುಂದಾದಾಗ, ಎಚ್ಚರಗೊಂಡ ವಿಶ್ವನಾಥರೆಡ್ಡಿ ಇಬ್ಬರನ್ನು ಕಾಲಿನಿಂದ ಒದ್ದು, ಚೀರಾಡಿದ್ದಾನೆ. ಆಗ ಮನೆಯ ಎಲ್ಲಾ ಸದಸ್ಯರು ಎಚ್ಚರಗೊಂಡಾಗ ಆರೋಪಿಗಳ ಸಂಚು ಬಯಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ: ಡಿ.ಕೆ ಶಿವಕುಮಾರ್ ಸ್ಪಷ್ಟನೆ

ಘಟನೆ ಕುರಿತು ಕೆಂಭಾವಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಶ್ವನಾಥರೆಡ್ಡಿ ಪತ್ನಿ ಮತ್ತು ಆಕೆಯ ಮೈದುನನ್ನು ಬಂಧಿಸಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.