ಯಾದಗಿರಿ: ಇಲ್ಲಿನ ಹಳಿಸಗರ ಪ್ರದೇಶದ ನಕಲಿ ಮದ್ಯ ಮಾರಾಟ ಜಾಲದ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ಇಂಪೀರಿಯಲ್ ಬ್ಲೂ ಬ್ರಾಂಡ್ನ 180 ಬಾಕ್ಸ್ಗಳನ್ನು ಜಪ್ತಿ ಮಾಡಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.
ನಕಲಿ ಮದ್ಯ ಮಾರಾಟ ಜಾಲ ವ್ಯಾಪಕವಾಗಿ ಹರಡುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ನಗರದ ಹಳಿಸಗರ ಬಡಾವಣೆಯ ಮರೆಪ್ಪ ಎಂಬಾತನ ಮನೆ ಮೇಲೆ ದಾಳಿ ನಡೆಸಿದರು. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಇಂಪೀರಿಯಲ್ ಬ್ಲೂ ಬ್ರಾಂಡ್ನ ನಕಲಿ ಮದ್ಯದ 50 ಬಾಕ್ಸ್ಗಳನ್ನು ಮತ್ತು ಕಮಲಮ್ಮ ಎನ್ನುವರ ಮನೆಯಲ್ಲಿ ಇದೇ ಹೆಸರಿನ 130 ಬಾಕ್ಸ್ಗಳನ್ನು ಜಪ್ತಿ ಮಾಡಿಕೊಂಡು, ಮರೆಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜೊತೆಗೆ ತಲೆಮರೆಸಿಕೊಂಡಿರುವ ಕಮಲಮ್ಮ ಮತ್ತು ರಮೇಶ್ ಬಂಧನಕ್ಕೆ ಬಲೆ ಬೀಸಲಾಗಿದೆ.
ಇದನ್ನೂ ಓದಿ: ನಕಲಿ ಮದ್ಯ ಸೇವಿಸಿ ಏಳು ಮಂದಿ ದುರ್ಮರಣ.. 12 ಜನರು ಅಸ್ವಸ್ಥ
ಶಹಾಪುರ ಉಪ ವಿಭಾಗದ ಅಧೀಕ್ಷಕ ಮಲ್ಲಿಕಾರ್ಜುನ ರೆಡ್ಡಿ, ಶಹಾಪುರ ವಲಯ ಅಬಕಾರಿ ನಿರೀಕ್ಷಕ ವಿಜಯಕುಮಾರ್ ಹಿರೇಮಠ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಜಿಲ್ಲಾ ವೀಕ್ಷಣಾಧಿಕಾರಿ ಕೇದಾರನಾಥ್, ಅಬಕಾರಿ ಇಲಾಖೆಯ ನಿರೀಕ್ಷಕರಾದ ಧನರಾಜ್, ಉಪನಿರೀಕ್ಷಕ ಸುರೇಶ ಕುಮಾರ ಮಳಕೇರಿ, ಮಹಮ್ಮದ್ ಸುಭಾನಿ, ಜಟ್ಟೆಪ್ಪ ಪೂಜಾರಿ, ಅನಿಲ್ ಕುಮಾರ್, ಚಂದ್ರಶೇಖರ್, ನಾಗರಾಜ, ಬಸವರಾಜ, ರಫೀಕ್ ಹಾಗೂ ಕಂದಾಯ ಇಲಾಖೆಯ ರಮೇಶ್, ಮರ್ಲಿಂಗಪ್ಪ, ಮಹಿಳಾ ಪೊಲೀಸ್ ಸುವರ್ಣ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ನಕಲಿ ಮದ್ಯ ತಯಾರಿಕಾ ಘಟಕ ಸೀಜ್.. ಓರ್ವನ ಬಂಧನ
ಕಲಬುರಗಿ ಅಬಕಾರಿ ಇಲಾಖೆ ಜಂಟಿ ಆಯುಕ್ತರ ನಿರ್ದೇಶನದಂತೆ, ಉಪ ಆಯುಕ್ತ ಮೋತಿಲಾಲ್ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ಪತ್ತೆ ಹಚ್ಚಿ ದಾಳಿ ಮಾಡುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇಂತಹ ಪ್ರಕರಣಗಳನ್ನು ಮಟ್ಟ ಹಾಕಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.
ಆದಷ್ಟು ಬೇಗ ತಲೆಮರಿಸಿಕೊಂಡ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಶಹಾಪುರ ಉಪ ಅಧೀಕ್ಷಕ ಮಲ್ಲಿಕಾರ್ಜುನ್ ರೆಡ್ಡಿ ತಿಳಿಸಿದ್ದಾರೆ.