ETV Bharat / state

ಯಾದಗಿರಿ: ಮದ್ಯದ ಅಮಲಿನಲ್ಲಿ ಭಿಕ್ಷುಕಿ ಮೇಲೆ‌‌ ಅತ್ಯಾಚಾರವೆಸಗಿದ ಆರೋಪಿ ಅರೆಸ್ಟ್​ - ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿ ಅರೆಸ್ಟ್

ಯಾದಗಿರಿ ನಗರದ ಹಳೆ ಬಸ್​ ನಿಲ್ದಾಣದಲ್ಲಿ ಕುಡಿದ ಅಮಲಿನಲ್ಲಿ ಭಿಕ್ಷುಕಿ ಮೇಲೆ‌‌ ಅತ್ಯಾಚಾರವೆಸಗಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

drunken man Raped  beggar and arrested in  Yadgir
ಕುಡಿದ ಅಮಲಿನಲ್ಲಿ ಭಿಕ್ಷುಕಿ ಮೇಲೆ‌‌ ಅತ್ಯಾಚಾರವೆಸಗಿದ ಕಾಮುಕ ಬಂಧನ
author img

By

Published : Nov 27, 2021, 2:11 PM IST

ಯಾದಗಿರಿ : ಕುಡಿದ ಅಮಲಿನಲ್ಲಿ ಭಿಕ್ಷುಕಿ ಮೇಲೆ‌‌ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಹಳೆ‌ ಬಸ್‌‌ ನಿಲ್ದಾಣದಲ್ಲಿ ನವೆಂಬರ್ 23ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹನುಮಂತ (40) ಎಂಬ ಕಾಮುಕ ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ, ತಾನೂ ಕುಡಿದು ದುಷ್ಕೃತ್ಯವೆಸಗಿದ್ದಾನೆ. ಭಿಕ್ಷುಕಿ ನಿರಾಕರಿಸಿದರೂ ಹಲ್ಲೆ‌ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ಸ್ಥಳೀಯರು ಪ್ರಶ್ನಿಸಿದ್ದಾಗ ಆಕೆ ನನ್ನ ಹೆಂಡತಿ ಆಗಬೇಕೆಂದು ನಾಟಕ ಮಾಡಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರನ್ನ ಸ್ಥಳಕ್ಕೆ ಕರೆಸಿ ಆತನನ್ನು ಒಪ್ಪಿಸಿದ್ದಾರೆ.

ಹನುಮಂತ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ‌ ನಿವಾಸಿಯಾಗಿದ್ದು, ನವೆಂಬರ್ ‌24ರಂದು ಬೆಳಗ್ಗೆ ಯಾದಗಿರಿಯ ‌ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದೆವ್ವ ಬಿಡಿಸೋ ಹೆಸರಲ್ಲಿ ಐದು ವರ್ಷ ಅಕ್ಕ, ತಂಗಿ ಮೇಲೆ ಲೈಂಗಿಕ ದೌರ್ಜನ್ಯ; ನಕಲಿ ಬಾಬಾ, ಪುತ್ರನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.