ETV Bharat / state

ಡಾ.ರಾಮ್ ರಾವ್ ಮಹಾರಾಜ್ ಅಂತಿಮ ದರ್ಶನಕ್ಕಾಗಿ ಮುಂಬೈನತ್ತ ಭಕ್ತರು.. - Yadgiri

ಮುಂಬೈನಲ್ಲಿ ಬಂಜಾರ ಸಮಾಜದ ಪೌರಾದೇವಿಯ ಶಕ್ತಿ ಪೀಠದಲ್ಲಿ ಡಾ.ರಾಮ್ ರಾವ್ ಮಹಾರಾಜ್ ಲಿಂಗೈಕ್ಯರಾಗಿದ್ದಾರೆ. ಜಗದ್ಗುರುಗಳ ಅಂತ್ಯಕ್ರಿಯೆಯನ್ನು ಮುಂಬೈ ಸಮೀಪದ ಪೌರಾಗಢದ ಪೌರಾದೇವಿಯ ಶಕ್ತಿ ಪೀಠದಲ್ಲಿ ನಡೆಸಲಾಗುತ್ತಿದೆ..

Devotees  go to Mumbai
ಡಾ.ರಾಮ್ ರಾವ್ ಮಹಾರಾಜ್ ಅಂತಿಮ ದರ್ಶನ ಪಡೆಯಲು ಮುಂಬೈನತ್ತ ತೆರಳುತ್ತಿರುವ ಭಕ್ತರು
author img

By

Published : Nov 1, 2020, 12:09 PM IST

ಯಾದಗಿರಿ : ಬಂಜಾರ ಸಮಾಜದ ಆರಾಧ್ಯ ದೈವ ಜಗದ್ಗುರು ಡಾ.ರಾಮ್ ರಾವ್ ಮಹಾರಾಜ್ ಅವರು ಲಿಂಗೈಕ್ಯರಾಗಿದ್ದಾರೆ. ಈ ಹಿನ್ನೆಲೆ ಜಗದ್ಗುರುಗಳ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗವಹಿಸಿ, ಶ್ರೀಗಳ ಅಂತಿಮ ದರ್ಶನ ಪಡೆಯಲು ಯಾದಗಿರಿಯಿಂದ ಕೂಡ ಭಕ್ತ ಸಾಗರ ಮುಂಬೈನತ್ತ ರಾತ್ರಿಯೇ ಪ್ರಯಾಣ ಬೆಳೆಸಿದೆ.

ಡಾ.ರಾಮ್ ರಾವ್ ಮಹಾರಾಜ್ ಅಂತಿಮ ದರ್ಶನ ಪಡೆಯಲು ಮುಂಬೈನತ್ತ ತೆರಳುತ್ತಿರುವ ಭಕ್ತರು..

ಮುಂಬೈನಲ್ಲಿ ಬಂಜಾರ ಸಮಾಜದ ಪೌರಾದೇವಿಯ ಶಕ್ತಿ ಪೀಠದಲ್ಲಿ ಡಾ.ರಾಮ್ ರಾವ್ ಮಹಾರಾಜ್ ಲಿಂಗೈಕ್ಯರಾಗಿದ್ದಾರೆ. ಜಗದ್ಗುರುಗಳ ಅಂತ್ಯಕ್ರಿಯೆಯನ್ನು ಮುಂಬೈ ಸಮೀಪದ ಪೌರಾಗಢದ ಪೌರಾದೇವಿಯ ಶಕ್ತಿ ಪೀಠದಲ್ಲಿ ನಡೆಸಲಾಗುತ್ತಿದೆ.

ಈ ಹಿನ್ನೆಲೆ ಬಂಜಾರ ಸಮಾಜದ ಶ್ರೀಗಳ ಸಾವಿರಾರು ಸಂಖ್ಯೆಯ ಭಕ್ತರು ಯಾದಗಿರಿಯಿಂದ ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ತೆರಳಿದ್ದಾರೆ. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರು ಎರಡು ಬಸ್ ಸೌಲಭ್ಯ ಕಲ್ಪಿಸಿ ಭಕ್ತರಿಗೆ ತೆರಳಲು ಅನುಕೂಲ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.