ಯಾದಗಿರಿ: ಯಾದಗಿರಿ ತಾಲೂಕಿನ ಠಾಣಾಗುಂದಿ ಗ್ರಾಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಬಾಲ್ಯ ವಿವಾಹವನ್ನು ತಡೆಹಿಡಿಯಲಾಯಿತು.
ಠಾಣಾಗುಂದಿ ಗ್ರಾಮದಲ್ಲಿ ಬಾಲಕಿಯ ಅನುಮತಿಯಿಲ್ಲದೆ ಮದುವೆ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ್ದಾರೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಯ ಸಮ್ಮುಖದಲ್ಲಿ ಬಾಲ್ಯ ವಿವಾಹವನ್ನು ತಡೆ ಹಿಡಿಯಲಾಗಿದೆ.
ಸದ್ಯ ಬಾಲಕಿಗೆ ಹದಿನೇಳು ವರ್ಷ ತುಂಬಿದ್ದು, ಮದುವೆಯಾಗಬೇಕಿದ್ದ ಗಂಡಿಗೆ 45 ವರ್ಷಾವಾಗಿದೆ ಎಂದು ತಿಳಿದು ಬಂದಿದೆ. ಪೋಷಕರಿಂದ ಬಾಲಕಿಯನ್ನು ವಶಪಡಿಸಿಕೊಂಡಿದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ. ವಿಚಾರಣೆ ಮುಗಿದ ನಂತರ ಬಾಲ ಮಂದಿರಕ್ಕೆ ಬಿಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ.