ETV Bharat / state

ಯುವತಿಯ ಸಾವಿನ ಪ್ರಕರಣ.. ಬಂಧಿತರನ್ನು ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ

author img

By

Published : May 13, 2020, 10:51 AM IST

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿ ಈಗ ಆರೋಪಿತರೆಂದು ಬಂಧಿಸಲಾದ ಮಹೇಶ ಮತ್ತಿತರರು ಸೇರಿ ನಾಲ್ವರನ್ನು ಬಿಡುಗಡೆ ಮಾಡಿ ನ್ಯಾಯ ಒದಗಿಸಬೇಕು.

Surapur
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ

ಸುರಪುರ : ತಾಲೂಕಿನ ಅಮಲಿಹಾಳ ಗ್ರಾಮದಲ್ಲಿ ಮಾರ್ಚ್ 22ರಂದು ನಡೆದ ವಿಜಯಲಕ್ಷ್ಮಿ ಎಂಬ ಯುವತಿಯ ಸಾವಿನ ಪ್ರಕರಣ ಮರ್ಯಾದಾ ಹತ್ಯೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಗಂಭೀರ ಆರೋಪ ಮಾಡಿ ಬಂಧಿತರನ್ನು ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಿಗೆ ಆಗ್ರಹಿಸಲಾಗಿದೆ.

ಕಳೆದ ಮಾರ್ಚ್ ತಿಂಗಳ 22ನೇ ತಾರೀಖು ತಾಲೂಕಿನ ಅಮಲಿಹಾಳ ಗ್ರಾಮದಲ್ಲಿ ವಿಜಯಲಕ್ಷ್ಮಿ ಎಂಬ ಯುವತಿಯೋರ್ವಳು ಪೇಂಟ್ ಕುಡಿದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಇದಕ್ಕೆ ಯಾದಗಿರಿ ತಾಲೂಕಿನ ಎಂ ಹೊಸಹಳ್ಳಿ ಗ್ರಾಮದ ಯುವಕ ಮಹೇಶ್ ಮತ್ತು ಅವರ ಜೊತೆಗಾರರು ಕಾರಣ ಎಂದು ಯುವತಿ ಪೋಷಕರಿಂದ ಯಾದಗಿರಿ ಮಹಿಳಾ ಠಾಣೆಯಲ್ಲಿ ಮಾರ್ಚ್ 23ರಂದು ಪ್ರಕರಣ ದಾಖಲಾಗಿತ್ತು.

ತಹಶೀಲ್ದಾರ್‌ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ..

ಈ ಘಟನೆಗೆ ಸಂಬಂಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಶಾಸಕ ರಾಜುಗೌಡ ಹಾಗೂ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿ ಈಗ ಆರೋಪಿತರೆಂದು ಬಂಧಿಸಲಾದ ಮಹೇಶ ಮತ್ತಿತರರು ಸೇರಿ ನಾಲ್ವರನ್ನು ಬಿಡುಗಡೆ ಮಾಡಿ ನ್ಯಾಯ ಒದಗಿಸಬೇಕು. ಇಲ್ಲವಾದರೆ ಈ ತಿಂಗಳ 27ರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.