ETV Bharat / state

ಮಾಸ್ಕ್ ನಮ್ಮೆಲ್ಲರ ನಿತ್ಯ ಬದುಕಿನ ಭಾಗವಾಗಬೇಕು: ಸಿಪಿಐ ದೇವೀಂದ್ರಪ್ಪ ಧೂಳಖೇಡ್ - ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಕಾರ್ಯ

ಗುರುಮಠಕಲ್ ಪಟ್ಟಣದ ಸೇವಾ ಭಾರತಿ ಸಂಸ್ಥೆಯ ವತಿಯಿಂದ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ವಾಹನ ಚಾಲಕರಿಗೆ ನೀಡುವ ಮೂಲಕ ಸಿಪಿಐ ದೇವೀಂದ್ರಪ್ಪ ಧೂಳಖೇಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

free mask and sanitizer distribution
ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್​ ವಿತರಣೆಗೆ ಚಾಲನೆ
author img

By

Published : Jun 14, 2020, 10:21 AM IST

ಗುರುಮಠಕಲ್: ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದ್ದು ಜನರು ಕಡ್ಡಾಯವಾಗಿ ಮಾಸ್ಕ್​ಗಳನ್ನು ಬಳಸಿಕೊಳ್ಳಬೇಕು. ಮಾಸ್ಕ್‌ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿರುವುದದಿಂದ ಅದು ನಮ್ಮೆಲ್ಲರ ನಿತ್ಯ ಬದುಕಿನ ಭಾಗವಾಗಬೇಕಿದೆ ಎಂದು ನಗರದ ಸಿಪಿಐ ದೇವೀಂದ್ರಪ್ಪ ಧೂಳಖೇಡ್ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸೇವಾ ಭಾರತಿ ಸಂಘದ ವತಿಯಿಂದ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೇವಾ ಭಾರತಿ ಸಂಘದವತಿಯಿಂದ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ

ಪಟ್ಟಣದ ಆಟೋ ಚಾಲಕರು, ಕ್ಷೌರಿಕ ಅಂಗಡಿಗಳು, ಗೂಡಂಗಡಿಗಳಿಗೆ ಸಾಮಾನ್ಯವಾಗಿ ಹೆಚ್ಚು ಜನರು ಬರುವುದರಿಂದಾಗಿ ಅಲ್ಲಿ ಸೋಂಕು ಹರಡಬಾರದೆಂಬ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡುತ್ತಿರುವುದಾಗಿ ಸಂಸ್ಥೆಯ ಕಾರ್ಯಕರ್ತರು ತಿಳಿಸಿದರು.

ಪಿಎಸ್‌ಐ ಶೀಲಾದೇವಿ ನ್ಯಾಮನ್, ಡಾ.ಭಾಗಿರೆಡ್ಡಿ ಗುನ್ನಿ, ಸೇವಾ ಭಾರತಿ ಬಸಪ್ಪ ಸಂಜನೋಳ, ಮಹಾಂತೇಶ ಸಾಹುಕಾರ್, ವಿಶಾಲ ಮುತ್ತಿಗಿ ಸೇರಿದಂತೆ ಇತರರು ಈ ವೇಳೆ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.