ಯಾದಗಿರಿ : ಜಿಲ್ಲೆಯಲ್ಲಿಂದು ಮತ್ತೆ 114 ಜನರಿಗೆ ಸೋಂಕು ತಗುಲಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2233ಕ್ಕೆ ಏರಿದೆ.
ಮಹರಾಷ್ಟ್ರದಿಂದ ಆಗಮಿಸಿದ ವಲಸಿಗರಲ್ಲೇ ಹೆಚ್ಚಾಗಿ ಸೋಂಕಿನ ಪ್ರಕರಣ ಕಾಣಿಸಿದ್ದವು. ಈಗ ಜಿಲ್ಲೆಯ SARI ಮತ್ತು ILI ಪ್ರಕರಣ ಹೆಚ್ಚಾಗುತ್ತಿವೆ. ಇಂದು ಪತ್ತೆಯಾದ ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಕೊರೊನಾ ವೈರಸ್ನಿಂದ 28 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 1619 ಜನ ಬಿಡುಗಡೆಯಾಗಿದ್ದಾರೆ. 612 ಪ್ರಕರಣ ಸಕ್ರಿಯವಾಗಿವೆ. ಇಬ್ಬರು ಮೃತಪಟ್ಟಿರುತ್ತಾರೆ.