ಸುರಪುರ: ಮಹಾರಾಷ್ಟ್ರದ ಗಡಿಯಲ್ಲಿ ಕೂಲಿ ಮಾಡಿಕೊಂಡಿರುವ ಸುರಪುರ ತಾಲೂಕಿನ ವಿವಿಧ ಗ್ರಾಮಗಳ ಕಾರ್ಮಿಕರಿಗೆ ದಿಗ್ಬಂಧನ ಹಾಕಲಾಗಿದ್ದು, ಅವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಿಮಗೆ ಕೊರೊನಾ ಬಂದಿದೆ. ನಿಮ್ಮ ಊರಿಗೆ ವಾಪಸ್ ಹೋಗಿ ಇಲ್ಲವೇ ಗುಡಿಸಲು ಸುಟ್ಟು ಹಾಕುತ್ತೆವೆಂದು ಕಾರ್ಮಿಕರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದು, ನಾವು ಸುಮಾರು 140 ಕಾರ್ಮಿಕರ ನರಳಾಟ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ನಮ್ಮನ್ನು ಕರೆದುಕೊಂಡು ಹೋಗಿ ಎಂದು ನೋವು ತೋಡಿಕೊಂಡಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೆರಡಿ ಗ್ರಾಮದಲ್ಲಿ ಸುರಪುರ ತಾಲೂಕಿನ 140 ಕಾರ್ಮಿಕರಿಗೆ ಕೆಲಸ ನಿರ್ವಹಿಸುತ್ತಿದ್ದು, ಬಸ್ ಸಂಚಾರ ಸ್ಥಗಿತ ಹಿನ್ನೆಲೆ ತಮ್ಮ ಗ್ರಾಮಗಳಿಗೆ ಬರಲು ಪರದಾಡುವಂತಾಗಿದೆ. ನಾಲ್ಕು ತಿಂಗಳ ಹಿಂದೆ ಸುರಪುರ ತಾಲೂಕಿನ ಕೊಡೇಕಲ, ಅರಕೇರಾಕೆ ಮೊದಲಾದ ಗ್ರಾಮದಿಂದ ಕೂಲಿ ಕೆಲಸ ಮಾಡಲು ಕಾರ್ಮಿಕರು ಮಹಾರಾಷ್ಟ್ರಕ್ಕೆ ತೆರಳಿದ್ದರು. ಕೊರೊನಾ ಭೀತಿ ಹಿನ್ನೆಲೆ ಕಾರ್ಮಿಕರಲ್ಲೂ ಆತಂಕ ಹೆಚ್ಚಾಗಿದೆ.
ಸ್ಥಳೀಯ ಶಾಸಕ ರಾಜುಗೌಡ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿ ಮಹಾರಾಷ್ಟ್ರ ಸರ್ಕಾರವನ್ನು ಸಂಪರ್ಕಿಸಿ ಎಲ್ಲ ಕಾರ್ಮಿಕರನ್ನು ಮರಳಿ ಕರೆ ತರಲು ಮುಂದಾಗಬೇಕಿದೆ.