ಯಾದಗಿರಿ: ಚಂಡರಕಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಮುಖ್ಯಮಂತ್ರಿಗಳ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ರಾತ್ರಿ ಮಕ್ಕಳೊಂದಿಗೆ ಸೇರಿ ಉತ್ತರ ಕರ್ನಾಟಕದ ಊಟ ಸವಿದರು.
ರಾತ್ರಿ ಚಂಡರಕಿ ಶಾಲಾ ಮಕ್ಕಳಿದ ಆಯೋಜನೆ ಮಾಡಿದ್ದ ಸಾಂಸ್ಕೃತಿ ಕಾರ್ಯಕ್ರಮ ವೀಕ್ಷಣೆ ಮಾಡಿದ ಬಳಿಕ ಅವರು ಮಕ್ಕಳೊಂದಿಗೆ ಊಟ ಮಾಡಿದರು. ಪ್ರಮುಖವಾಗಿ ಉತ್ತರ ಕರ್ನಾಟಕದ ವಿಶೇಷ ಅಡುಗೆ ಗೋಧಿ ಹುಗ್ಗಿ, ಪುಂಡೆಪಲ್ಲೆ,ಖಡಕ್ ಜೋಳದ ರೊಟ್ಟಿ,ಮಿರ್ಚಿ ಭಜ್ಜಿ ಹಾಗೂ ಬಿಳಿ ಅನ್ನ ವಿಶೇಷವಾಗಿತ್ತು.
ಸಿಎಂ ಕುಮಾರಸ್ವಾಮಿಯವರಿಗೆ ಜಿಲ್ಲಾ ಉಸ್ತವಾರಿ ಸಚಿವರಾದ ರಾಜಶೇಖರ ಪಾಟೀಲ್,ಬಂಡೆಪ್ಪ ಖಾಶಂಪೂರ್, ಶಾಸಕ ನಾಗನಗೌಡ ಕಂದಕೂರ್, ಸಿಎಂ ಕಾರ್ಯದರ್ಶಿ ಕೋನರೆಡ್ಡಿ, ಪ್ರವಾಸೋದ್ಯಮ ಇಲಾಖೆ ಸಚಿವ ಸಾ. ರಾ. ಮಹೇಶ್, ಜಿಲ್ಲಾಧಿಕಾರಿ ಕೂರ್ಮರಾವ್ ಹಾಗೂ ಸಿಇಓ ಕವಿತಾ ಮನ್ನಿಕೇರಿ , ಹಾಗೂ ಪೊಲೀಸ್ ಇಲಾಖೆ ವರಿಷ್ಠಾಧಿಕಾರಿ ಖುಷಿಕೇಶ ಸೋನವಣೆ ಸಾಥ್ ನೀಡಿದರು.