ಯಾದಗಿರಿ: ವೇಗವಾಗಿ ಚಲಿಸುತ್ತಿದ್ದ ಕಾರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರ್ನಲ್ಲಿದ್ದ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಹಾಪೂರ ತಾಲೂಕಿನ ಗುಂಡಾಪುರ ಕ್ರಾಸ್ ಬಳಿ ನಡೆದಿದೆ.
![car-accident-in-yadgir-dot-four-dead](https://etvbharatimages.akamaized.net/etvbharat/prod-images/6145919_thumbnail.jpg)
ಶರಣಬಸವ ಅಂಗಡಿ (24), ಶರಣು ಕೂಡ್ಲಿಗಿ (24), ವಿಶ್ವನಾಥ ಘಂಟಿ (23) ಹಾಗೂ ತಿರುಪತಿ (28) ಎಂಬುವವರು ದುರ್ಘಟನೆಯಲ್ಲಿ ಮೃತಪಟ್ಟವರು. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ನಗನೂರ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
![car-accident-in-yadgir-dot-four-dead](https://etvbharatimages.akamaized.net/etvbharat/prod-images/6145919_thumb.jpg)
ಶಹಾಪೂರ ನಗರಕ್ಕೆ ಕೆಲಸದ ನಿಮಿತ್ತ ಆಗಮಿಸಿ ವಾಪಸ್ ಊರಿಗೆ ತೆರಳುವ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಗೋಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.