ಯಾದಗಿರಿ : ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಮೂರು ಲಾರಿಗಳನ್ನು ತಾಲೂಕಿನ ಭೀಮರಾಯಗುಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಅಕ್ಕಿ ಚೀಲಗಳನ್ನು ಹೊತ್ತು ಗುರುಮಠಕಲ್ ಕಡೆಯಿಂದ ಗುಜರಾತಿನ ಅಹಮದಾಬಾದ್ ಕಡೆಗೆ ಲಾರಿಗಳು ತೆರಳುತ್ತಿದ್ದವು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮೂರು ಲಾರಿಗಳಿಂದ ಒಟ್ಟು 21.62 ಲಕ್ಷ ರೂ. ಮೌಲ್ಯದ ( 50 ಕೆಜಿ ತೂಕದ) 1,962 ಅಕ್ಕಿ ಚೀಲಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಭೀಮರಾಯನಗುಡಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ಎಸ್ಪಿ ಡಾ. ಸಿಬಿ ವೇದಮೂರ್ತಿ, ಸುರಪುರ್ ವಿಭಾಗದ ಡಿವೈಎಸ್ಪಿ ಡಾ.ದೇವರಾಜ್ ಅಭಿನಂದಿಸಿದ್ದಾರೆ.