ಯಾದಗಿರಿ: ಭೀಕರ ಬಸ್ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಡೆದಿದೆ.
ಶಹಾಪುರದಿಂದ ಕೆಂಭಾವಿ ಮಾರ್ಗವಾಗಿ ಸುರಪುರ ತಾಲೂಕಿನ ನಡಿಹಾಳ ತಾಂಡ ಹಾಗೂ ಏವೂರ ಕ್ರಾಸ್ ಮಧ್ಯೆ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಎಕ್ಸೆಲ್ ಕಟ್ಟಾಗಿ, ಬಸ್ ಪಲ್ಟಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಬಸ್ ಚಾಲಕ ದವಾಲಸಾಬ್, ಓರ್ವ ಮಹಿಳೆ ಪದ್ಮಮ್ಮ, ಓರ್ವ ವೃದ್ಧ ಕೆಂಚಪ್ಪ ಸಾವನ್ನಪ್ಪಿದ್ದು, ಇಪ್ಪತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಬಸ್ ಹಳೆಯದಾಗಿದ್ದು, ರಿಪೇರಿ ಮಾಡಲಾಗಿತ್ತು. ಶಹಾಪುರ ಬಸ್ ಡಿಪೋ ಮ್ಯಾನೇಜರ್ ಹಳೆಯ ಗಾಡಿಗಳನ್ನು ರಿಪೇರಿ ಮಾಡಿ ಸಂಚಾರಕ್ಕೆ ಬಿಟ್ಟಿದ್ದಾರೆ ಎಂದು ಸ್ಥಳೀಯರು ಹಾಗೂ ಗೌಪ್ಯ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.