ಸುರಪುರ: ಹುಣಸಗಿ ಪೊಲೀಸರು ಇಂದು ಭರ್ಜರಿ ಬೇಟೆಯಾಡಿ 25 ಬೈಕ್‌ಗಳನ್ನು ಕದ್ದಿದ್ದ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಸೆಪ್ಟಂಬರ್ ತಿಂಗಳ 18 ಹಾಗೂ 19ರಂದು ಹುಣಸಗಿ ಬಸ್ ನಿಲ್ದಾಣದ ಬಳಿಯಲ್ಲಿ ದಿನಾಲೂ ಒಂದೊಂದು ಬೈಕ್ ಕಳ್ಳತನಾಗಿರುವ ಬಗ್ಗೆ ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ಬೈಕ್ ಕಳ್ಳತನ ಪ್ರಕರಣಗಳ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದ ಹುಣಸಗಿ ಪೊಲೀಸರು, ಯಾದಗಿರಿ ಎಸ್ಪಿ ರುಶಿಕೇಶ ಭಗವಾನ್ ಹಾಗೂ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.
ಹುಣಸಗಿ ಸಿಪಿಐ ದವಲತ್ ಎನ್. ಕುರಿ ನೇತೃತ್ವದಲ್ಲಿ ತಂಡವೊಂದು ರಚನೆ ಮಾಡಲಾಗಿದ್ದು, ಪಿಎಸ್ಐ ಬಾಪುಗೌಡ ಪಾಟೀಲ್ ಅವರನ್ನೊಳಗೊಂಡ ತಂಡವು ನಿರಂತರವಾಗಿ ಕಾರ್ಯಾಚರಣೆ ನಡೆಸಿ ಇಂದು ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ಮೌನೇಶ್ ಎಂಬಾತ ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಮನಹಳ್ಳಿ ಗ್ರಾಮದವನಾದ ಮೌನೇಶ್ ಅಲಿಯಾಸ್ ಪಿಂಟ್ಯಾ ತಂದೆ ಜಗನ್ನಾಥ ಎಂಬುವವನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಪೊಲೀಸರು ಬಾಯಿ ಬಿಡಿಸಿದಾಗ ಬೈಕ್ ಕದ್ದ ಬಗ್ಗೆ ಒಪ್ಪಿಕೊಂಡು ಆರೋಪಿಯು 5 ಬೈಕ್‌ಗಳನ್ನು ಬಲಶೆಟ್ಟಿಹಾಳದ ಮನೆಯಲ್ಲಿ ಹಾಗೂ ಇನ್ನುಳಿದ 20 ಬೈಕ್ ಹುಣಸಗಿ ಮದ್ದಿನ ಮನೆಯ ಹಳೇ ಕಟ್ಟಡವೊಂದರಲ್ಲಿ ಇಟ್ಟಿರುವುದಾಗಿ ಹೇಳಿದ್ದರಿಂದ ಎಲ್ಲಾ ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಹುಣಸಗಿ ಪೊಲೀಸರ ಈ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತಪಡಿಸಿರುವ ಎಸ್ಪಿ ರುಶಿಕೇಶ ಭಗವಾನ್ ಹಾಗೂ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿಯವರು ಸಿಪಿಐ ದವಲತ್ ಕುರಿ ಹಾಗೂ ಪಿಎಸ್ಐ ಬಾಪುಗೌಡ ಪಾಟೀಲ್ ಹಾಗೂ ತನಿಖಾ ತಾಂಡದಲ್ಲಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬಹುಮಾನ ಘೋಷಿಸಿದ್ದಾರೆ .
ಇಂದು ಸಂಜೆ ಆರೋಪಿ ಹಾಗೂ ಬೈಕ್‌ಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಎಸ್ಪಿ ರುಶಿಕೇಶ ಭಗವಾನ್, ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿ ಹಾಗೂ ಹುಣಸಗಿ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.