ETV Bharat / state

ಸಿಎಂ ಗ್ರಾಮ ವಾಸ್ತವ್ಯ: ಯಾದಗಿರಿಯಲ್ಲಿ ಕೈ-ಜೆಡಿಎಸ್​ ಮಧ್ಯೆ ಶುರುವಾಯ್ತು ಬ್ಯಾನರ್​ ರಾಜಕೀಯ

ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಚಂಡ್ರಕಿ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇವಲ ಜೆಡಿಎಸ್​ ಕಾರ್ಯಕರ್ತರ ಫೋಟೊಗಳನ್ನು ಮಾತ್ರ ಬ್ಯಾನರ್​ನಲ್ಲಿ ಹಾಕಿದ್ದಾರೆಂದು ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿಯಲ್ಲಿ ಸಿಎಂ ವಾಸ್ತವ್ಯ
author img

By

Published : Jun 20, 2019, 8:48 PM IST

ಯಾದಗಿರಿ: ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ಜಿಲ್ಲೆಯ ಚಂಡ್ರಕಿ ಗ್ರಾಮ ಸಿದ್ಧವಾಗಿದೆ. ಅಲ್ಲದೆ, ಫ್ಲೆಕ್ಸ್​, ಬ್ಯಾನರ್​​​ಗ​ಳು ರಾರಾಜಿಸುತ್ತಿದ್ದು, ಜಿಲ್ಲೆಯು ಮಧುವಣಗುತ್ತಿಯಂತೆ ಸಿಂಗಾರಗೊಂಡಿದೆ.

ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಚಂಡ್ರಕಿ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಯಾದಗಿರಿಯಲ್ಲಿ ಶುರುವಾಯ್ತು ಬ್ಯಾನರ್​ ರಾಜಕೀಯ

ಇನ್ನು ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕ ನಾಗನಗೌಡ ಕಂದಕೂರ ಹಾಗೂ ಅವರ ಮಗ ಶರಣಗೌಡ ಕಂದಕೂರ ಫೋಟೊಗಳು ನಗರದಲ್ಲಿ ಕಂಡು ಬರುತ್ತಿರುವುದು ‌ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಾಯಕರಿಂದಲೇ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದ್ರೆ ಜೆಡಿಎಸ್ ಪಕ್ಷದವರು ಕೇವಲ ತಮ್ಮ ಪಕ್ಷದವರ ಬ್ಯಾನರ್​​ಗಳನ್ನು ಮಾತ್ರ ಅಳವಡಿಸಿ ಮೈತ್ರಿ ಸರ್ಕಾರಕ್ಕೆ ಅವಮಾನ ಮಾಡ್ತಿದಾರೆ ಎಂದು ಶಾಸಕ ನಾಗನಗೌಡ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ್​ ಅವರ ಫೋಟೊವನ್ನು ಬ್ಯಾನರ್​ನಲ್ಲಿ ಹಾಕದಿರುವುದಕ್ಕೆ ಸ್ಥಳೀಯ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಸಿ ಎಂ ಗ್ರಾಮವಾಸ್ತವ್ಯ ಹಿನ್ನಲೆ ರಾರಾಜಿಸುತ್ತಿವೆ ಪ್ಲೆಕ್,ಬ್ಯಾನರ್.

ನಿರೂಪಕ: ಸಿ ಎಂ ಗ್ರಾಮ ವಾಸ್ತವ್ಯ ಹಿನ್ನಲೆ ಯಾದಗಿರಿ ಜಿಲ್ಲೆಯಾದ್ಯಂತ ಪ್ಲೆಕ್ಸ , ಬ್ಯಾನರ್ಸಗಳು ರಾರಜಿಸುತ್ತಿದ್ದು ಜಿಲ್ಲೆಯು ಮಧುವಣಗುತ್ತಿಯಂತೆ ಸಿಂಗಾರಗೊಂಡಿದೆ.

Body:
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಚಂಡ್ರಿಕಿ ಗ್ರಾಮದಲ್ಲಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುವ ಹಿನ್ನಲೆ ಜಿಲ್ಲೆಯಾದ್ಯಂತ ಪ್ಲೆಕ್ಸ , ಬ್ಯಾನರ್ಸ್ಗಳು ರಾರಾಜಿಸುತ್ತಿವೆ.

Conclusion:ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕ ನಾಗಣ್ಣಗೌಡ ಕಂದಕೂರ ಹಾಗೂ ಮಗ ಶರಣಗೌಡ ಕಂದಕೂರ ಪೋಟೋಗಳು ನಗರದಲ್ಲಿ ಕಂಡು ಬರುತ್ತಿದ್ದು ‌ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ನಾಯಕರಿಂದಲ್ಲೆ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಜೆಡಿಎಸ್ ಪಕ್ಷದವರು ಕೇವಲ ತಮ್ಮ ಪಕ್ಷದ ಬ್ಯಾನರಗಳನ್ನು ಅಳವಡಿಸಿ ಮೈತ್ರಿ ಸರಕಾರಕ್ಕೆ ಅವಮಾನ ಎಸಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಪರೋಕ್ಷವಾಗಿ ಶಾಸಕ ನಾಗಣ್ಣಗೌಡ ಕಂದಕೂರಗೆ ಟಾಂಗ ನೀಡಿದರು.

ರಾಜ್ಯದಲ್ಲಿ ಮೈತ್ರಿ ಸರಕಾರವಿದ್ದರೂ ಕೂಡ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ್ ಕೂಡ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದರೂ ಸೌಜನ್ಯಕಾದ್ರೂ ಕೂಡ ಪೋಟೋ ಹಾಕಿಲ್ಲ ಎಂದು ಸ್ಥಳೀಯ ಕಾಂಗ್ರೆಸಿಗರು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿ ಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕ ನಾಗಣ್ಣಗೌಡ ಕಂದಕೂರ ಕಟೌಟ ಪೋಟೋಗಳು ಮಾತ್ರ ರಾರಾಜಿಸುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರು ಕೆಂಡಮಂಡಳರಾಗಿದ್ದಾರೆ.‌
ETV Bharat Logo

Copyright © 2024 Ushodaya Enterprises Pvt. Ltd., All Rights Reserved.