ETV Bharat / state

ಕೊರೊನಾದಿಂದ ದೇಶವನ್ನು ಮೋದಿ ರಕ್ಷಿಸಿದ್ದಾರೆ.. ಮಾಜಿ ಸಚಿವ ಬಾಬುರಾವ ಚಿಂಚನಸೂರು - ಮುಂಬರುವ ಬಸವಕಲ್ಯಾಣ ಉಪಚುನಾವಣೆ

ಒಂದು ವೇಳೆ ಮೋದಿ ಬದಲು ಬೇರೆಯವರು ಪ್ರಧಾನಮಂತ್ರಿಯಾಗಿದ್ದರೆ ಕೋವಿಡ್ ಅವಧಿಯಲ್ಲಿ ಹೆಣಗಳನ್ನು ಬುಲ್ಡೋಜರ್ ಮೂಲಕ ತೆಗೆಯುವ ದುಸ್ಥಿತಿ ಬರುತ್ತಿತ್ತು..

Baburava Chinchanasur talk
ಬಾಬುರಾವ ಚಿಂಚನಸೂರು
author img

By

Published : Feb 13, 2021, 9:06 PM IST

ಯಾದಗಿರಿ : ದೇಶದಲ್ಲಿ ಕೋವಿಡ್ ಸಂಕಷ್ಟ ಎದುರಾದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಟ್ಟುನಿಟ್ಟಿನ ಕ್ರಮಕೈಗೊಂಡು ದೇಶವನ್ನೇ ರಕ್ಷಣೆ ಮಾಡಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರು ಹೇಳಿಕೆ ನೀಡಿದ್ದಾರೆ.

ಮಾಜಿ ಸಚಿವ ಬಾಬುರಾವ ಚಿಂಚನಸೂರು..

ಓದಿ: ದಿಕ್ಕು ತಪ್ಪಿಸುವ ಕಾರ್ಯಕ್ರಮವಲ್ಲ, ಒಟ್ಟಿಗೆ ಹೋಗುವ ಕಾರ್ಯಕ್ರಮ: ದಿಂಗಾಲೇಶ್ವರ ಶ್ರೀ

ನಗರದಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು, ಕೋಲಿ ಕಬ್ಬಲಿಗ ಸಮಾಜವನ್ನು ಎಸ್​​ಟಿಗೆ ಸೇರ್ಪಡೆ ಮಾಡುವ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೂರ್ಯ-ಚಂದ್ರ ಹುಟ್ಟು ಮುಳುಗುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿ ಕೋಲಿ ಕಬ್ಬಲಿಗ ಸಮಾಜವನ್ನು ಎಸ್​​ಟಿಗೆ ಸೇರ್ಪಡೆ ಮಾಡುವುದು ಶತಃಸಿದ್ದ ಎಂದರು.

ಒಂದು ವೇಳೆ ಮೋದಿ ಬದಲು ಬೇರೆಯವರು ಪ್ರಧಾನಮಂತ್ರಿಯಾಗಿದ್ದರೆ ಕೋವಿಡ್ ಅವಧಿಯಲ್ಲಿ ಹೆಣಗಳನ್ನು ಬುಲ್ಡೋಜರ್ ಮೂಲಕ ತೆಗೆಯುವ ದುಸ್ಥಿತಿ ಬರುತ್ತಿತ್ತು ಎಂದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಚಿಂಚನಸೂರ, ಕಾಂಗ್ರೆಸ್ ಪಕ್ಷವು ಅವರನ್ನು ಗುರುತಿಸಿ ಸ್ಥಾನ ನೀಡಿದೆ. ಖರ್ಗೆ ಅವರು ಹಿರಿಯರು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇನ್ನು, ಬಸವಕಲ್ಯಾಣ ಉಪಚುನಾವಣೆ ವೀಕ್ಷಕನಾಗುವ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಮುಂಬರುವ ಬಸವಕಲ್ಯಾಣ ಉಪಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ವಿಜಯ ಪತಾಕೆ ಹಾರಿಸಿದೆ ಎಂದು ಚಿಂಚನಸೂರ ಭವಿಷ್ಯ ನುಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.