ಯಾದಗಿರಿ : ಜಿಲ್ಲೆಯ ಯಾನಾಗುಂದಿ ಗ್ರಾಮದ ಮಾಣಿಕ್ಯಗಿರಿ ಬೆಟ್ಟದಲ್ಲಿರುವ ಮಾತಾ ಮಾಣಿಕೇಶ್ವರಿ ಆಶ್ರಮದ ಮಹಾದ್ವಾರದ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಅ.17ರ ರಾತ್ರಿ 9 ಗಂಟೆಗೆ ಮಹಾದ್ವಾರದ ಗೇಟ್ ದಾಟಿ ಬಿಳಿ ಬಟ್ಟೆಯನ್ನು ಧರಿಸಿದ ವ್ಯಕ್ತಿಯೊಬ್ಬ ಮುಖ ಮುಚ್ಚಿಕೊಂಡು ಮಹಾದ್ವಾರದ ಬಾಗಿಲನ್ನು ಕಲ್ಲಿನಿಂದ ಜೋರಾಗಿ ಮುರಿಯಲು ಯತ್ನಿಸಿದ್ದಾನೆ. ಆಗ ಅದನ್ನು ಕಂಡ ಅಲ್ಲಿನ ಭಕ್ತರು ಅವರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮಾತಾ ಮಾಣಿಕೇಶ್ವರಿ ಆಶ್ರಮದ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಾಧುವಿನ ವೇಷಧಾರಿಯೊಬ್ಬ ಕಳೆದ ನಾಲ್ಕು ಸಲ ಕಳ್ಳತನಕ್ಕೆ ಯತ್ನಿಸಿದ್ದಾನೆ. ಆಶ್ರಮದ ಕೆಳಗಡೆ ರಾಮಮಂದಿರದಲ್ಲಿ ವಾಸಿಸುತ್ತಿದ್ದ ಆತ ಕಾವಿ ವಸ್ತ್ರಧಾರಿಯಾಗಿ ಇರುತ್ತಿದ್ದ. ಕಳ್ಳತನದ ದಿನ ಬಿಳಿ ಬಟ್ಟೆ ಧರಿಸಿಕೊಂಡಿದ್ದನು.
ಮಾತಾ ಮಾಣಿಕೇಶ್ವರಿ ಲಿಂಗೈಕ್ಯ ಆಗಿರುವ ಗದ್ದಿಗೆ ಹತ್ತಿರ ಹೋಗಿ ಧ್ಯಾನ ಮಾಡುತ್ತೇನೆ ಎಂದು ಪದೇುದೆ ಕಿರಿಕಿರಿ ಮಾಡುತ್ತಿದ್ದ. ಟ್ರಸ್ಟ್ ನಿಯಮಾನುಸಾರ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.
ಮಹಾದ್ವಾರ ಬಾಗಿಲು ಮುರಿಯುವಾಗ ಮಾತಾಜಿ ಭಕ್ತರು ಕಳ್ಳನನ್ನು ಹಿಡಿದಿದ್ದಾರೆ. ಆಗ ಆತ ಬಿಳಿ ಬಟ್ಟೆ ತ್ಯಜಿಸಿ ಒಳಗಿದ್ದ ಕಾವಿ ಬಟ್ಟೆಯನ್ನು ತೊಟ್ಟಿರುವುದನ್ನು ಕಂಡು ಬಂದಿದೆ. ಆಗ ತಕ್ಷಣವೇ ಅವರನ್ನು ಕಾನೂನು ಪ್ರಕಾರ ಯಾನಾಗುಂದಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಓದಿ: Missing 2000 crores.. ಬೆಂಗಳೂರಿನಾದ್ಯಂತ ಆಪ್ನಿಂದ ರಸ್ತೆ 'ಗುಂಡಿಗಳ ಪೂಜೆ'