ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ - ಯಾದಗಿರಿ ಜಿಲ್ಲಾ ಸುದ್ದಿ

12 ಸಾವಿರ ರೂ. ಸಂಬಳ, ಹುದ್ದೆ ಖಾಯಂಗೊಳಿಸುವಂತೆ ಯಾದಗಿರಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

asha-workers-protest-in-yadagiri
ಆಶಾ ಕಾರ್ಯಕರ್ತೆಯ ಪ್ರತಿಭಟನೆ
author img

By

Published : Jul 7, 2020, 5:20 PM IST

ಯಾದಗಿರಿ: ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ನೀಡುತ್ತಿರುವ ಅಲ್ಪ ಪ್ರೋತ್ಸಾಹ ಧನದಿಂದ ಜೀವನ ನಡೆಸಲು ಕಷ್ಟಪಡುವಂತಾಗಿದ್ದು, ಇದೀಗ 12 ಸಾವಿರ ಸಂಬಳ, ಖಾಯಂ ಹುದ್ದೆ ನೀಡುವಂತೆ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್‌ ಆಗಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜನರ ಆರೋಗ್ಯದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದ್ರೆ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಪ್ರತಿ ತಿಂಗಳು ನೀಡುತ್ತಿರುವ 4 ಸಾವಿರ ಪ್ರೋತ್ಸಾಹ ಧನ ಸಾಕಾಗದೇ ಕುಟುಂಬ ನಿರ್ವಹಣೆಗೆ ಹೆಣಗಾಡುವಂತಾಗಿದೆ. ಕಷ್ಟ ಸುಖ ಎನ್ನದೇ ಸೇವಾ ಮನೋಭಾವದಿಂದ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು, ಇದೀಗ 12 ಸಾವಿರ ರೂ. ಸಂಬಳ, ಖಾಯಂ ಹುದ್ದೆ ನೀಡುವಂತೆ ಹೋರಾಡುತ್ತಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ರಾಜ್ಯದಲ್ಲಿ ಸುಮಾರು 40 ಸಾವಿರ, ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಗರ್ಭಿಣಿಯರು, ಮಗು ಮತ್ತು ಬಾಣಂತಿಯರ ಆರೈಕೆಗಾಗಿ ಇವರನ್ನು ನೇಮಿಸಲಾಗಿದೆ. ಆದ್ರೆ ಇದರ ಹೊರತಾಗಿಯೂ ಆಶಾ ಕಾರ್ಯಕರ್ತೆಯರನ್ನ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಸರ್ವೆ ಕಾರ್ಯಕ್ಕೂ ಬಳಸಿಕೊಳ್ಳಲಾಗುತ್ತಿದೆ. ಪ್ರೋತ್ಸಾಹದ ಹಣದಲ್ಲೇ ಸ್ವತಃ ಖರ್ಚು ಮಾಡಿಕೊಂಡು ಕೆಲಸ ಮಾಡಿದ್ದಾರೆ.

ಸರ್ಕಾರ 3 ಸಾವಿರ ರೂ ಪ್ರೋತ್ಸಾಹ ಧನ ನೀಡುತ್ತಿದ್ದೇವೆ ಅಂತ ಹೇಳುತ್ತಿದೆ. ಆದ್ರೆ ಕೆಲವು ಜನರಿಗೆ ಚೆಕ್ ನೀಡಿ ಉಳಿದವರಿಗೆ ಇನ್ನೂ ಕೂಡ ಪ್ರೋತ್ಸಾಹ ಹಣದ ಚೆಕ್ ನೀಡಿಲ್ಲ. ಜಿಲ್ಲೆಯಲ್ಲಿ ಯಾವ ಆಶಾ ಕಾರ್ಯಕರ್ತೆಯರಿಗೂ ಈ ಪ್ರೋತ್ಸಾಹ ಧನ ಸಿಕ್ಕಿಲ್ಲ ಎಂದು ಯಾದಗಿರಿ ಆಶಾ ಕಾರ್ಯಕರ್ತೆಯೊಬ್ಬರು ಆರೋಪಿಸಿದ್ದಾರೆ.

ಅಲ್ಲದೆ ಬೇಡಿಕೆ ಈಡೇರಿಕೆಗಾಗಿ ಹಲವಾರು ಬಾರಿ ಹೋರಾಟ ನಡೆಸಿದ್ರೂ ಸರ್ಕಾರ ಕಣ್ತೆರೆದು ನೋಡ್ತಿಲ್ಲ ಅಂತಾ ಕಿಡಿಕಾರಿದ್ದಾರೆ. ಸರ್ಕಾರದ ವರ್ತನೆಗೆ ಬೇಸತ್ತು ಇದೇ ತಿಂಗಳು ಜುಲೈ 10 ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಗುತ್ತಿಗೆ ಪೌರ ನೌಕರರಿಗೆ ಸರ್ಕಾರ ಕನಿಷ್ಠ 8-10 ಸಾವಿರ ರೂ ಸಂಬಳ ನೀಡಲಾಗುತ್ತಿದೆ. ಆದ್ರೆ ನಮಗೆ ಮಾತ್ರ ಇಷ್ಟು ಕಡಿಮೆ ಪ್ರೋತ್ಸಾಹ ಧನ ನೀಡುವ ಮೂಲಕ ಸರ್ಕಾರ ಕಡೆಗಣಿಸುತ್ತಿದೆ ಅಂತಾ ಅಸಮಾಧಾನ ಹೊರಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.