ETV Bharat / state

ಅಂಗನವಾಡಿ ಸಮಸ್ಯೆ ನೂರು, ಮಕ್ಕಳ ಗೋಳು ಕೇಳೋರು ಯಾರು? - ಅಂಗನವಾಡಿ ಕೇಂದ್ರಗಳ ಸಮಸ್ಯೆಗಳು

ಅಂಗನವಾಡಿ ಕೇಂದ್ರಗಳಲ್ಲಿ ನೂರಾರು ಸಮಸ್ಯೆಗಳು ಕಂಡು ಬರುತ್ತಿದ್ದು, ಮಕ್ಕಳ ವಿಕಸನಕ್ಕೆ ಅಡ್ಡಿಯಾಗುತ್ತಿದೆ. ಬಹಳಷ್ಟು ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ ಕಾರಣ ಮಳೆಗಾಲದಲ್ಲಿ ನಾನಾ ತೊಂದರೆ ಅನುಭವಿಸಬೇಕಿ. ಕೂಡಲೇ ಸರ್ಕಾರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

anganawadi-centers-problems
ಅಂಗನವಾಡಿ ಸಮಸ್ಯೆ ನೂರು
author img

By

Published : Aug 24, 2020, 2:25 PM IST

ಯಾದಗಿರಿ: ಕುಡಿಯಲು ಶುದ್ಧ ನೀರಿಲ್ಲ. ವಿದ್ಯುತ್‌ ಸಂಪರ್ಕವಿಲ್ಲ. ಕಿತ್ತುಹೋಗಿರುವ ನೆಲಹಾಸು, ಶಿಥಿಲಗೊಂಡಿರುವ ಕಟ್ಟಡಗಳು, ಬಿರುಕು ಬಿಟ್ಟ ಗೋಡೆಗಳು, ಬೀಳುವ ಸ್ಥಿತಿಯಲ್ಲಿರುವ ಕಿಟಕಿ–ಬಾಗಿಲು, ಬಯಲಲ್ಲೇ ಶೌಚಾಲಯ. ಇವು ಅಂಗನವಾಡಿ ಕೇಂದ್ರಗಳ ಸ್ಥಿತಿ-ಗತಿ. ಇಂದಿಗೂ ಸಹ ಸ್ವಂತ ಸೂರು ಸೇರಿದಂತೆ ನೂರಾರು ಸಮಸ್ಯೆಗಳನ್ನು ಈ ಕೇಂದ್ರಗಳು ಎದುರಿಸುತ್ತಿವೆ.

ಬಾಡಿಗೆ ಕಟ್ಟಡ, ಪಂಚಾಯಿತಿಗೆ ಸೇರಿದ ಕಟ್ಟಡ, ಸಮುದಾಯ ಭವನ ಸೇರಿದಂತೆ ಪರ್ಯಾಯ ವ್ಯವಸ್ಥೆಯಲ್ಲಿ ನೂರಾರು ಅಂಗನವಾಡಿಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ. ಅಂಗನವಾಡಿ ಕೇಂದ್ರಗಳ ಮೂಲಕ ತಾಯಿ ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮಹತ್ವಾಕಾಂಕ್ಷಿ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ, ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಈ ಯೋಜನೆ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ಈಟಿವಿ ಭಾರತ ನಡೆಸಿದ ರಿಯಾಲಿಟಿ ಚೆಕ್​​​ನಲ್ಲಿ​ ಆ ಆರೋಪ ನಿಜ ಎಂಬುದು ಗೊತ್ತಾಗಿದೆ.

ಶಿಥಿಲ ಕಟ್ಟಡಗಳು: ಕೂಲಿ ಕಾರ್ಮಿಕರು, ರೈತರು ಹೆಚ್ಚು ಸಂಖೆಯಲ್ಲಿರುವ ಯಾದಗಿರಿಯಲ್ಲಿ ಮಾತ್ರ ಬಡತನ ತಾಂಡವಾಡುತ್ತಿದೆ. ಬಡತನದ ಬೇಗೆಯಲ್ಲಿ ಬಳಲುತ್ತಿರುವ ತಾಯಿ ಮತ್ತು ಮಕ್ಕಳನ್ನು ಪೌಷ್ಟಿಕರನ್ನಾಗಿಸಲು ಜಾರಿಗೆ ತರಲಾಗಿರುವ ಯೋಜನೆಯ ಮೂಲಕ ಫಲಾನುಭವಿಗಳಿಗೆ ಸೇರುವಲ್ಲಿ ವಿಫಲವಾಗಿದೆ. ಬಹಳಷ್ಟು ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದಲ್ಲಿ ಮಕ್ಕಳು ನೆನೆಯಬೇಕಿದೆ. ಅಲ್ಲದೆ, ಕೆಲವು ಕೇಂದ್ರಗಳು ಚಿಕ್ಕದಾಗಿದ್ದು, ಇದರಿಂದ ಮಕ್ಕಳು ವಿವಿಧ ಸಮಸ್ಯೆಗಳನ್ನು ಎದುರಿಸಬೇಕಿದೆ.

ಆಹಾರ ಧಾನ್ಯಗಳ ಮಾರಾಟ: ಕೆಲ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹಾಗೂ ತಾಯಂದಿರಿಗೆ ನೀಡುವ ಪೌಷ್ಟಿಕ ಆಹಾರ ಧಾನ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿಂದೆ ಕಳಪೆ ಆಹಾರ ಹಂಚಿಕೆಯಾಗಿರುವ ಕುರಿತು ಕೂಡ ವರದಿಯಾಗಿವೆ. ಇನ್ನೊಂದೆಡೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಅದೂ ಸರಿಯಾದ ಸಮಯಕ್ಕೆ ಬರುವುತ್ತಿಲ್ಲ ಎನ್ನುತ್ತಾರೆ ಕಾರ್ಯಕರ್ತೆಯರು.

ಮಾನಸಿಕ ಒತ್ತಡದಲ್ಲಿ ಕಾರ್ಯಕರ್ತೆಯರು: ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ನೇಮಿಸಲಾಗಿದೆ. ಆದರೆ, ಅವರನ್ನು ಯೋಜನೆಗೆ ಸೀಮಿತಗೊಳಿಸದೆ ಸರ್ಕಾರದ ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ, ಅವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದು, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ ಅನುದಾನ ಬಿಡುಗಡೆ ವಿಳಂಬವಾಗುತ್ತಿದ್ದು, ಕಾರ್ಯಕರ್ತೆಯರು ತಮ್ಮ ಕೈಯಿಂದಲೇ ಖರ್ಚು ಮಾಡುತ್ತಿದ್ದಾರೆ. ನಂತರ ಬಿಡುಗಡೆಯಾದ ಅನುದಾನದಲ್ಲಿ ತಮ್ಮ ಹಣ ವಾಪಸ್ ಪಡೆಯುತ್ತಿದ್ದಾರೆ.

ಅಂಗನವಾಡಿ ಸಮಸ್ಯೆ ನೂರು

ಕೆಲ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬಹಳಷ್ಟು ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದು, 3-6 ವರ್ಷದ ಮಕ್ಕಳ ವಿಕಾಸಕ್ಕೆ ಅಡಚಣೆಯಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಆರು ಹಂತದಲ್ಲಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಂದ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ. ಅದರಲ್ಲಿ ದೋಷ ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು. ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸ್ಥಳ ಗುರುತಿಸಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ಅಧಿಕಾರಿ ಪ್ರಭಾಕರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಅಂಕಿ-ಅಂಶ

ಒಟ್ಟು ಅಂಗನವಾಡಿ ಕೇಂದ್ರಗಳು1386
ಸ್ವಂತ ಸೂರಿಲ್ಲದ ಕಟ್ಟಡಗಳು (ಬಾಡಿಗೆ)281
ಅಂಗನವಾಡಿ ಕಾರ್ಯಕರ್ತೆಯರು 1,386
ಅಂಗನವಾಡಿ ಸಹಾಯಕಿಯರು1,333
ಶಿಥಿಲಾವಸ್ಥೆ ಕಟ್ಟಡಗಳು200ಕ್ಕೂ ಅಧಿಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.