ಯಾದಗಿರಿ: ಹಿಮಾಲಯದ ನಡುಗಡ್ಡೆಯ ದ್ವೀಪದಂತಿದ್ದ ನೀಲಕಂಠರಾಯನ ಗಡ್ಡೆಯ ಸಂಪರ್ಕ ಸೇತುವೆಗೆ ಜಿಲ್ಲಾ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡೆಗೆ ಕೃಷ್ಣ ನದಿ ಅಡ್ಡಲಾಗಿ ನಿರ್ಮಿಸಿದ ಸೇತುವೆಯನ್ನು ಪರಿಶೀಲಿಸಿದ ಸಹಾಯಕ ಆಯುಕ್ತ ಸೇತುವೆ ಸುರಕ್ಷಿತವಾಗಿದ್ದು ಗ್ರಾಮಸ್ಥರು ಭಯಪಡದೆ ಸಂಚರಿಸಬಹುದು ಎಂದು ಅಭಯ ನೀಡಿದರು.
ಕೃಷ್ಣ ನದಿಯ ಹೃದಯ ಭಾಗದಲ್ಲಿರುವ ಈ ನೀಲಕಂಠರಾಯನ ಗಡ್ಡೆಯು ಪ್ರತಿವರ್ಷ ನಾರಾಯಣಪುರ ಬಸವ ಸಾಗರ ಜಲಾಶಯದ ನೀರು ಹರಿಸಿದಾಗ ನಡುಗಡ್ಡೆಯ ದ್ವೀಪದಂತಾಗುತ್ತಿತ್ತು. ಈ ಕುರಿತು ಮಾಧ್ಯಮದಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಈ ನೀಲಕಂಠರಾಯನ ಗಡ್ಡೆಗೆ ಸೇತುವೆ ನಿರ್ಮಿಸಲು ಮುಂದಾಗಿತ್ತು. ಈ ಹಿನ್ನೆಲೆ ಸೇತವೆ ನಿರ್ಮಾಣವಾಗಿ ಗಡ್ಡೆಯ ಜನರಿಗೆ ಸುಲಭ ಸಂಚಾರಕ್ಕೆ ಸಾಕ್ಷಿಯಾಗಿದೆ.
ಹೈದ್ರಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಸುಮಾರು ₹1.62 ಕೋಟಿ ರೂಪಾಯಿ ವೆಚ್ಚದಲ್ಲಿ ನೀಲಕಂಠರಾಯನ ಗಡ್ಡೆಯ ಸೇತುವೆ ನಿರ್ಮಾಣವಾಗಿದೆ.
ಈ ಮಧ್ಯೆ ಬಸವ ಸಾಗರ ಜಲಾಶಯದಿಂದ ಎರಡು ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣ ನದಿಗೆ ಹರಿಸಲಾದ ಹಿನ್ನೆಲೆ ನದಿಪಾತ್ರದ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಸಿ ಶಂಕರಗೌಡ, ಇನ್ನೆನ್ನು ಕೇಲವೆ ದಿನಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದ್ದು, ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡುವ ಸೇತುವೆ ಲೋಕಾರ್ಪಣೆ ಮಾಡಲಾಗುವುದೆಂದು ತಿಳಿಸಿದರು.