ETV Bharat / state

ಕೃಷ್ಣಾ ನದಿ ಈಜಿಕೊಂಡು ಮಾವನ ಮನೆಗೆ ಹೊರಟಿದ್ದ ವ್ಯಕ್ತಿ... ಮಧ್ಯದಲ್ಲಿ ಸುಳಿಗೆ ಸಿಲುಕಿ ಫಜೀತಿ! - ಯಾದಗಿರಿ ಸುದ್ದಿ

ಕೃಷ್ಣಾ ನದಿ ಮಧ್ಯೆ ಸಿಲಿಕಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸರು ರಕ್ಷಿಸಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಈಜಿಕೊಂಡು ಮಾವನ ಮನೆಗೆ ತೆರಳಲು ಹೋಗಿ ನದಿ ಮಧ್ಯೆದಲ್ಲಿಯೇ ಸಿಲುಕಿದ ವ್ಯಕ್ತಿ...!
author img

By

Published : Oct 3, 2019, 5:11 AM IST

Updated : Oct 3, 2019, 5:25 AM IST

ಯಾದಗಿರಿ: ನದಿ ಈಜಿಕೊಂಡು ಮಾವನ ಮನೆಗೆ ತೆರಳುತ್ತಿದ್ದ ವ್ಯಕ್ತಿವೋರ್ವ ಮಧ್ಯದಲ್ಲಿಯೇ ಸುಳಿಗೆ ಸಿಕ್ಕು ಸಂಕಷ್ಟಕ್ಕೆ ಸಿಲುಕಿದ್ದ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದ ಕೃಷ್ಣಾ ನದಿಯಲ್ಲಿ ನಡೆದಿದೆ.

ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

ದೇವಾಪುರ ನಿವಾಸಿ ಗುತ್ತಪ್ಪ (30) ನದಿಯ ಮಧ್ಯದಲ್ಲಿ ಸಿಲುಕಿದ್ದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ದೇವಾಪೂರ ಹಾಗೂ ಶೆಳ್ಳಗಿಯ ನಡುವೆ ಕೃಷ್ಣಾ ನದಿ ಹರಿಯುತ್ತದೆ. ಎರಡು ಗ್ರಾಮಗಳ ನಡುವೆ ಅಂದಾಜು 1 ಕಿ.ಮೀ ಅಂತರವಿದೆ. ಆದರೆ, ರಸ್ತೆ ಮೂಲಕ ಊರು ಸೇರಬೇಕೆಂದರೆ 7 ಕಿ.ಮೀ ರಸ್ತೆ ಪ್ರಯಾಣ ಮಾಡಬೇಕು. ಆದ್ದರಿಂದ ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಿದ್ರೆ ಕೆಲವರು ಈಜಿಕೊಂಡು ಆ ಗ್ರಾಮಕ್ಕೆ ಹೋಗುತ್ತಾರೆ.

ಸದ್ಯ, ನದಿಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ. ಹೀಗಾಗಿ ದೇವಾಪೂರ ಗ್ರಾಮದ ಗುತ್ತಪ್ಪ, ನದಿಯ ಮೂಲಕ ಈಜಿಕೊಂಡು ಶೆಳ್ಳಗಿ ಗ್ರಾಮದಲ್ಲಿರುವ ತನ್ನ ಮಾವನ ಮನೆಗೆ ತೆರಳಲು ಯತ್ನಿಸಿದ್ದರು. ಆದ್ರೆ ನದಿ ಮಧ್ಯೆ ನೀರಿನ ಸುಳಿವಿನಲ್ಲಿ ಸಿಲುಕಿದ್ದರಿಂದ ನಿತ್ರಾಣಗೊಂಡು, ನದಿ ಮಧ್ಯೆದ ಬಂಡೆ ಮೇಲೆ ಮಲಗಿದ್ದರು.

ಕೆಲ ಹೊತ್ತಿನ ಬಳಿಕ ಸಹಾಯಕ್ಕಾಗಿ ಗುತ್ತಪ್ಪ ಕಿರುಚಾಡಿದ್ದರು. ಅದು ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದವರಿಗೆ ಕೇಳಿಸಿದೆ. ಬಳಿಕ ಗುತ್ತಪ್ಪನನ್ನ ರಕ್ಷಿಸಲು ನದಿ ತೀರದಲ್ಲಿ ಸ್ನಾನ ಮಾಡುತ್ತಿದ್ದವರು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸುದ್ದಿ ತಿಳಿದು ಅಗ್ನಿಶಾಮಕ ತಂಡ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗುತ್ತಪ್ಪನನ್ನು ರಕ್ಷಿಸಿದ್ದಾರೆ. ಸದ್ಯ ಸುರಪುರದ ಸರ್ಕಾರಿ ಆಸ್ಪತ್ರೆಗೆ ಗುತ್ತಪನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Intro:ಯಾದಗಿರಿ: ಈಜಿಕೊಂಡು ಮಾವನ ಮನೆಗೆ ತೆರಳಲು ಹೋಗಿ ನದಿ ಮಧ್ಯೆದಲ್ಲಿಯೇ ಅಳಿಯ ಮಹಾಶಯ ಸಿಲುಕಿ ಪರದಾಡಿದ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದ ಕೃಷ್ಣಾ ನದಿಯಲ್ಲಿ ನಡೆದಿದೆ.

ನೀರಿನ ಮದ್ಯೆದಲ್ಲಿ ಸಿಲುಕಿ ಸಾವಿನ ಮನೆ ಕದತಟ್ಟಿ ಬಂದಿರುವ ಅದೃಷ್ಟವಂತ ವ್ಯಕ್ತಿ ದೇವಾಪುರ ನಿವಾಸಿ ಗುತ್ತಪ್ಪ (30) ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ:

ದೇವಾಪೂರ ಹಾಗೂ ಶೆಳ್ಳಗಿಯ ನಡುವೆ ಕೃಷ್ಣಾ ನದಿ ಹರಿದಿದೆ. ಎರಡು ಗ್ರಾಮಗಳ ನಡುವೆ ಅಂದಾಜು ಒಂದು ಕಿಲೋ ಮಿಟರ್ ಅಂತರವಿದೆ. ಆದ್ರೆ ರಸ್ತೆ ಮೂಲಕ ಊರು ಸೇರಬೇಕೆಂದರೆ ಸರಿಸುಮಾರು ಏಳು ಕಿಲೋ ಮಿಟರ್ ರಸ್ತೆ ಪ್ರಯಾಣ ಮಾಡಬೇಕು. ಹೀಗಾಗಿ ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಿದ್ರೆ ಕೇಲವರು ಈಜಿಕೊಂಡು ದಡ ಸೇರುತ್ತಾರೆ.

ಸದ್ಯ ನದಿಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ ಹೀಗಾಗಿ ಇಂದು ಮಾವನ ಮನೆಗೆ ಹೋಗಿ ಹಣ ತರಬೇಕೆಂದು ಹೊರಟ್ಟಿದ್ದ ದೇವಾಪೂರ ಗ್ರಾಮದ ಗುತ್ತಪ್ಪ, ನದಿಯ ಮೂಲಕ ಈಜಿಕೊಂಡು ಶೆಳ್ಳಗಿ ಗ್ರಾಮಕ್ಕೆ ತೆರಳಲು ಯತ್ನಿಸಿದ್ದಾನೆ. ಆದ್ರೆ ಮಾರ್ಗ ಮದ್ಯೆ ನೀರಿನ ಸೇಳುವಿನಲ್ಲಿ ಸಿಲುಕಿ ಪರದಾಡಿ ನಿತ್ರಾಣಗೊಂಡಿದ್ದಾನೆ. ನದಿ ಮಧ್ಯೆದ ಬಂಡೆ ಮೇಲೆ ನಿತ್ರಾಣಗೊಂಡು ಮಲಗಿದ್ದಾನೆ.

ಕೆಲ ಹೊತ್ತಿನ ಬಳಿಕ ಸಹಾಯಕ್ಕಾಗಿ ಗುತ್ತಪ್ಪ ಕಿರಿಚಿದ್ದಾನೆ. ಅದೃಷ್ಟಕ್ಕೆ ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದವರ ಕಿವಿಗೆ ಕಿರುಚಾಟ ಕೇಳಿದೆ‌. ನಿತ್ರಾಣಗೊಂಡು ಮಲಗಿದ ಗುತ್ತಪ್ಪನನ್ನ ರಕ್ಷಿಸಲು ನದಿ ತೀರದಲ್ಲಿ ಸ್ನಾನ ಮಾಡುತ್ತಿದ್ದವರು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ಹಾಗೂ ಪೊಲೀಸ್ ಸಿಬ್ಬಂದಿ ಗುತ್ತಪ್ಪನನ್ನು ರಕ್ಷಿಸಿದ್ದಾರೆ. ಸದ್ಯ ಸುರಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಗುತ್ತಪ್ಪನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟನಲ್ಲಿ ಮಾವನ ಮನೆಗೆ ಹಣ ತರಲು ಹೋಗಿ ಪೇಚಿಗೆ ಸಿಲುಕಿದ ಗುತ್ತಪ್ಪ ಸಾವಿನ ಮನೆ ಬಾಗಿಲು ತಟ್ಟಿ ಮರಳಿದ್ದಾನೆ. ಗುತ್ತಪ್ಪ ಪ್ರಾಣಾಪಾಯದಿಂದ ಪಾರಾಗಿರುವ ವಿಷಯದಿಂದ ಕುಟುಂಬಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.Body:ಯಾದಗಿರಿ: ಈಜಿಕೊಂಡು ಮಾವನ ಮನೆಗೆ ತೆರಳಲು ಹೋಗಿ ನದಿ ಮಧ್ಯೆದಲ್ಲಿಯೇ ಅಳಿಯ ಮಹಾಶಯ ಸಿಲುಕಿ ಪರದಾಡಿದ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದ ಕೃಷ್ಣಾ ನದಿಯಲ್ಲಿ ನಡೆದಿದೆ.

ನೀರಿನ ಮದ್ಯೆದಲ್ಲಿ ಸಿಲುಕಿ ಸಾವಿನ ಮನೆ ಕದತಟ್ಟಿ ಬಂದಿರುವ ಅದೃಷ್ಟವಂತ ವ್ಯಕ್ತಿ ದೇವಾಪುರ ನಿವಾಸಿ ಗುತ್ತಪ್ಪ (30) ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಘಟನೆ:

ದೇವಾಪೂರ ಹಾಗೂ ಶೆಳ್ಳಗಿಯ ನಡುವೆ ಕೃಷ್ಣಾ ನದಿ ಹರಿದಿದೆ. ಎರಡು ಗ್ರಾಮಗಳ ನಡುವೆ ಅಂದಾಜು ಒಂದು ಕಿಲೋ ಮಿಟರ್ ಅಂತರವಿದೆ. ಆದ್ರೆ ರಸ್ತೆ ಮೂಲಕ ಊರು ಸೇರಬೇಕೆಂದರೆ ಸರಿಸುಮಾರು ಏಳು ಕಿಲೋ ಮಿಟರ್ ರಸ್ತೆ ಪ್ರಯಾಣ ಮಾಡಬೇಕು. ಹೀಗಾಗಿ ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಿದ್ರೆ ಕೇಲವರು ಈಜಿಕೊಂಡು ದಡ ಸೇರುತ್ತಾರೆ.

ಸದ್ಯ ನದಿಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ ಹೀಗಾಗಿ ಇಂದು ಮಾವನ ಮನೆಗೆ ಹೋಗಿ ಹಣ ತರಬೇಕೆಂದು ಹೊರಟ್ಟಿದ್ದ ದೇವಾಪೂರ ಗ್ರಾಮದ ಗುತ್ತಪ್ಪ, ನದಿಯ ಮೂಲಕ ಈಜಿಕೊಂಡು ಶೆಳ್ಳಗಿ ಗ್ರಾಮಕ್ಕೆ ತೆರಳಲು ಯತ್ನಿಸಿದ್ದಾನೆ. ಆದ್ರೆ ಮಾರ್ಗ ಮದ್ಯೆ ನೀರಿನ ಸೇಳುವಿನಲ್ಲಿ ಸಿಲುಕಿ ಪರದಾಡಿ ನಿತ್ರಾಣಗೊಂಡಿದ್ದಾನೆ. ನದಿ ಮಧ್ಯೆದ ಬಂಡೆ ಮೇಲೆ ನಿತ್ರಾಣಗೊಂಡು ಮಲಗಿದ್ದಾನೆ.

ಕೆಲ ಹೊತ್ತಿನ ಬಳಿಕ ಸಹಾಯಕ್ಕಾಗಿ ಗುತ್ತಪ್ಪ ಕಿರಿಚಿದ್ದಾನೆ. ಅದೃಷ್ಟಕ್ಕೆ ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದವರ ಕಿವಿಗೆ ಕಿರುಚಾಟ ಕೇಳಿದೆ‌. ನಿತ್ರಾಣಗೊಂಡು ಮಲಗಿದ ಗುತ್ತಪ್ಪನನ್ನ ರಕ್ಷಿಸಲು ನದಿ ತೀರದಲ್ಲಿ ಸ್ನಾನ ಮಾಡುತ್ತಿದ್ದವರು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡ ಹಾಗೂ ಪೊಲೀಸ್ ಸಿಬ್ಬಂದಿ ಗುತ್ತಪ್ಪನನ್ನು ರಕ್ಷಿಸಿದ್ದಾರೆ. ಸದ್ಯ ಸುರಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಗುತ್ತಪ್ಪನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟನಲ್ಲಿ ಮಾವನ ಮನೆಗೆ ಹಣ ತರಲು ಹೋಗಿ ಪೇಚಿಗೆ ಸಿಲುಕಿದ ಗುತ್ತಪ್ಪ ಸಾವಿನ ಮನೆ ಬಾಗಿಲು ತಟ್ಟಿ ಮರಳಿದ್ದಾನೆ. ಗುತ್ತಪ್ಪ ಪ್ರಾಣಾಪಾಯದಿಂದ ಪಾರಾಗಿರುವ ವಿಷಯದಿಂದ ಕುಟುಂಬಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.Conclusion:
Last Updated : Oct 3, 2019, 5:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.