ಯಾದಗಿರಿ: ಕೃಷ್ಣಾ ನದಿಯೊಳಗೆ ಸ್ನಾನ ಮಾಡಲು ಹೋದ ವ್ಯಕ್ತಿವೋರ್ವ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ತಿಂಥಣಿ ಗ್ರಾಮದ ಬಳಿ ನಡೆದಿದೆ.
ಯಾದಗಿರಿ ತಾಲೂಕಿನ ಯರಗೋಳಾ ಗ್ರಾಮದ ಪೀರಪ್ಪ (55) ನೀರು ಪಾಲಾಗಿರುವ ವ್ಯಕ್ತಿ. ಮೌನೇಶ್ವರ ಜಾತ್ರೆ ಹಿನ್ನೆಲೆ ದೇವರ ದರ್ಶನ ಪಡೆಯಲು ಕುಟುಂಬ ಸಮೇತ ನಿನ್ನೆ ಆಗಮಿಸಿದ ಪೀರಪ್ಪ, ಸ್ನಾನ ಮಾಡಲು ತೆರಳಿದಾಗ ಈ ಘಟನೆ ಸಂಭವಿಸಿದ್ದು, ಶೋಧಕಾರ್ಯ ಮುಂದುವರೆದಿದೆ.
ಪೀರಪ್ಪನ ಕಾಲಿಗೆ ಕೃಷ್ಣಾ ನದಿಯಲ್ಲಿನ ಮೀನಿನ ಬಲೆ ಸಿಲುಕಿದ್ದರಿಂದ ಆತ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿದ ಸುರಪುರ ಪೊಲೀಸ್ ಠಾಣೆಯ ಪೋಲಿಸರು ಹಾಗೂ ಅಗ್ನಿಶಾಮಕದಳ ಶೋಧ ಕಾರ್ಯ ಕೈಗೊಂಡಿತು.