ಯಾದಗಿರಿ: ಕೋವಿಡ್ನಿಂದ ಮೃತಪಟ್ಟ ಸಂಬಂಧಿಕರಿಗೆ ಸರ್ಕಾರದಿಂದ 15 ಲಕ್ಷ ರೂಪಾಯಿಗಳ ಪರಿಹಾರ ಕೊಡಿಸುವುದಾಗಿ ನಂಬಿಸಿ, ಕಚೇರಿ ಖರ್ಚಿಗೆಂದು 1.65 ಲಕ್ಷ ರೂಪಾಯಿಗಳ ಮುಂಗಡ ಹಣ ಪಡೆದಿದ್ದ ಆರೋಪದಡಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಯಶ್ ಕುಮಾರ ಎಂಬಾತನನ್ನು ಶಹಾಪುರ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಜಿಲ್ಲೆಯ ಶಹಾಪುರದ ವಿಜಯಕುಮಾರ್ ಎಂಬುವವರು 5 ನವೆಂಬರ್, 2021 ರಂದು ಮೃತಪಟ್ಟಿದ್ದರು. ಇವರ ಪುತ್ರ ರೇವಣಸಿದ್ದಪ್ಪ ಆನೆಗುಂದಿ ಅವರಿಗೆ ಪರಿಚಯವಾದ ಯಶ್ ಕುಮಾರ್ ಸರ್ಕಾರದಿಂದ 15 ಲಕ್ಷ ರೂಪಾಯಿಗಳ ಪರಿಹಾರ ಕೊಡಿಸುವುದಾಗಿ ನಂಬಿಸಿದ್ದಾನೆ.
ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪರಿಹಾರ ಬಿಡುಗಡೆಗೆ ಕಚೇರಿ ಖರ್ಚಿಗೆಂದು 1.65 ಲಕ್ಷ ರೂಪಾಯಿಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಯಾವುದೇ ಪರಿಹಾರ ಕೊಡಿಸದೆ, ತೆಗೆದುಕೊಂಡ ಹಣವನ್ನೂ ವಾಪಸ್ ಕೊಡದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ.
ಈ ಕುರಿತು ರೇವಣಸಿದ್ದಪ್ಪ ಆನೆಗುಂದಿ ನೀಡಿದ ದೂರಿನ ಮೇರೆಗೆ, ಶಹಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ತರಬೇತಿ ವೈದ್ಯೆಗೆ ಮುತ್ತು ಕೊಟ್ಟ ಹಾಸನದ ಹಿಮ್ಸ್ ಸಹಾಯಕ ಪ್ರಾಧ್ಯಾಪಕ!?