ಗುರುಮಠಕಲ್: ತಾಲೂಕಿನ ಕೇಶ್ವಾರ ಗ್ರಾಮದ ಹೋಮ್ ಗಾರ್ಡ್ ಸಿಬ್ಬಂದಿ ಉಷಪ್ಪ ಯಾದವ ಕೇಶ್ವಾರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯ ಸಾಧಿಸಿದ್ದಾರೆ.
ತಾಲೂಕಿನ ಚಂಡ್ರಿಕಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಕೇಶ್ವಾರ ಗ್ರಾಮದ 123 ಮತಗಟ್ಟೆ ಕ್ಷೇತ್ರಕ್ಕೆ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಗ್ರಾಮದ ಒಟ್ಟು ಮತದಾರರ ಪೈಕಿ 510 ಮಂದಿ ಮತ ಚಲಾಯಿಸಿದ್ದರು. ಅದರಲ್ಲಿ 204 ಮತಗಳನ್ನು ಪಡೆದು ಹೋಮ್ ಗಾರ್ಡ ಉಷಪ್ಪ ಜಯ ಕಂಡಿದ್ದಾರೆ.
ಗೃಹ ರಕ್ಷಕ ದಳದಲ್ಲಿ ಸುಮಾರು 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಉಷಪ್ಪ ಅವರು ತಮ್ಮೂರು ಕೇಶ್ವಾರ ಸೇರಿದಂತೆ ಸೈದಾಪುರ ಹಾಗೂ ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳ ಜನರ ಸಮಸ್ಯೆಗಳನ್ನು ಇತ್ಯರ್ಥ ಮಾಡುವಲ್ಲಿ ಪೊಲೀಸ್ ಅಧಿಕಾರಿ ಹಾಗು ಜನರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಅವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ ಎಂದು ಅವರ ಜೊತೆಗೆ ಕರ್ತವ್ಯ ನಿರ್ವಹಿಸಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಯಾದಗಿರಿ: ಗ್ರಾಮ ಸಮರದಲ್ಲಿ ಆಟೋ ಚಾಲಕನಿಗೆ ಗೆಲುವು
ಇನ್ನೂ ಪೊಲೀಸ್ ಇಲಾಖೆಯಲ್ಲಿ ಕೇವಲ ರಕ್ಷಣೆ ಮಾತ್ರ ನೀಡಬಹುದು. ಆದರೆ, ಸಾಮಾಜಿಕ ನ್ಯಾಯ ಒದಗಿಸಲು ರಾಜಕೀಯ ಉತ್ತಮ ವೇದಿಕೆಯಾಗಿದೆ ಎಂದು ಕೆಲ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.