ಯಾದಗಿರಿ: ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿಗೆ ತುತ್ತಾಗಿ ಓರ್ವರು ಮೃತಪಟ್ಟಿದ್ದಾರೆ. ಹೊಸದಾಗಿ 98 ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5,205ಕ್ಕೆ ಏರಿಕೆಯಾಗಿದೆ.
ಇಂದು ವರದಿಯಾದ 98 ಪ್ರಕರಣಗಳಲ್ಲಿ, 36 ಸೋಂಕಿತರು ಯಾದಗಿರಿ ನಗರ ಮತ್ತು ಗ್ರಾಮೀಣ ಪ್ರದೇಶದವರು, 46 ಸೋಂಕಿತರು ಶಹಪುರ ನಗರ ಮತ್ತು ಗ್ರಾಮೀಣ ಭಾಗದವರು, 16 ಸೋಂಕಿತರು ಸುರಪುರ ನಗರ ಮತ್ತು ಗ್ರಾಮೀಣ ಪ್ರದೇಶದವರಾಗಿದ್ದಾರೆ.
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿಂದು 65 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 3,503 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. 39 ಜನರು ಮೃತಪಟ್ಟಿದ್ದಾರೆ. ಸದ್ಯ 1,663 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.