ETV Bharat / state

ವಿಜಯಪುರ: ಹಾಡಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ - ವಿಜಯಪುರ ಯುವಕನ ಹತ್ಯೆಯ ಸಿಸಿಟಿವಿ ದೃಶ್ಯ

A youth killed in broad daylight in Vijayapura: ವಿಜಯಪುರ ನಗರದ ಹಕೀಂ ಚೌಕ್‌ನಲ್ಲಿ ಇಂದು ಮಧ್ಯಾಹ್ನ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

a-youth-was-stabbed-to-death-in-vijayapura
ವಿಜಯಪುರ: ಹಾಡಹಗಲೇ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ, ಸಿಸಿ ಕ್ಯಾಮೆರಾದಲ್ಲಿ ದೃಶ್ಯ
author img

By ETV Bharat Karnataka Team

Published : Dec 24, 2023, 8:18 PM IST

Updated : Dec 26, 2023, 5:17 PM IST

ವಿಜಯಪುರ: ಹಾಡಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ವಿಜಯಪುರ: ಹಾಡಹಗಲೇ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹಕೀಂ ಚೌಕ್‌ನಲ್ಲಿ ಭಾನುವಾರ ನಡೆಯಿತು. ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಯಾನ್ ಶೇಖ್ (19) ಕೊಲೆಯಾದ ಯುವಕ. ಈತ ಮಹಾರಾಷ್ಟ್ರದ ಪುಣೆ ನಿವಾಸಿ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಯುವತಿ ವಿಚಾರವಾಗಿ ಕೊಲೆ?: ಚಪ್ಪರಬಂದ್ ಕಾಲೊನಿಯ ನಿವಾಸಿ ಹುಸೇನ್ ಸಾಬ್​ (22) ನಂದಿಹಾಳ ಕೃತ್ಯ ಎಸಗಿದ ಆರೋಪಿ. ಕೊಲೆ ಬಳಿಕ ಹುಸೇನ್​ ಪರಾರಿಯಾಗಿದ್ದು ಸದ್ಯ ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತನ್ನ ಸ್ನೇಹಿತನ ಮದುವೆಗೆಂದು ಅಯಾನ್ ಶೇಖ್ ಪುಣೆಯಿಂದ ಬಂದಿದ್ದನು. ಈ ವೇಳೆ ಈ ಕೃತ್ಯ ನಡೆದಿದೆ. ಹುಡುಗಿಯ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

''ಮೃತ ಯುವಕ ಅಯಾನ್ ಪುಣೆ ನಿವಾಸಿಯಾಗಿದ್ದು ತನ್ನ ಸ್ನೇಹಿತನ ಮದುವೆ ನಿಮಿತ್ತ ಇಲ್ಲಿಗೆ ಆಗಮಿಸಿದ್ದನು. ಈ ವೇಳೆ ಈ ಕೃತ್ಯ ನಡೆದಿದೆ. ತನ್ನ ನಿಶ್ಚಿತಾರ್ಥ ಹಾಳಾಗಿದ್ದಕ್ಕೆ ಅಯಾನ್ ಶೇಖ್ ಕಾರಣವೆಂದು ತಿಳಿದು ಆರೋಪಿ ಹುಸೇನ್‌ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಕೊಲೆ ಆರೋಪಿ ಹುಸೇನ್‌ಸಾಬ್​ನನ್ನು ಬಂಧಿಸಲಾಗಿದೆ'' ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನವಾಣೆ ತಿಳಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ: ಪಹಾಡ್ ಖಾನ್ ಮ್ಯಾರೇಜ್ ಹಾಲ್ ಸಮೀಪ ಮಧ್ಯಾಹ್ನ 2:15ರ ಸುಮಾರಿಗೆ ನಾಲ್ಕೈದು ಜನ ಯವಕರು ಸುತ್ತುವರೆದಿದ್ದಾರೆ. ಈ ವೇಳೆ, ಯುವಕನಿಗೆ ಚಾಕು ಇರಿಯಲಾಗಿದೆ. ಇದನ್ನು ದಾರಿಹೋಕ ಕೆಲವು ಮಹಿಳೆಯರು ಗಮನಿಸಿ ಆರೋಪಿಗಳಾದ ಯುವಕರನ್ನು ಬೆದರಿಸುತ್ತಾರೆ. ಇದೇ ವೇಳೆ, ಮತ್ತೊಬ್ಬ ಯುವಕ ಇರಿತಕ್ಕೊಳಾಗದ ಯುವಕನನ್ನು ರಕ್ಷಿಸಿ ಬೇರೆಡೆ ಕರೆದುಕೊಂಡು ಹೋಗಲು ಯತ್ನಿಸುತ್ತಾನೆ. ಆದರೆ, ಗಂಭೀರವಾಗಿ ಗಾಯಗೊಂಡ ಯುವಕ ದಾರಿ ಮಧ್ಯದಲ್ಲೇ ಕುಸಿದು ಬೀಳುತ್ತಾನೆ. ಸ್ಥಳೀಯರು, ದಾರಿಹೋಕರು ಕೂಡ ಸ್ಥಳಕ್ಕೆ ಧಾವಿಸುತ್ತಾರೆ. ಈ ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಎಎಸ್ಪಿ​ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಜಯಪುರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಕೊಲೆ

Last Updated : Dec 26, 2023, 5:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.