ವಿಜಯಪುರ: ಕೇಂದ್ರ ಸರ್ಕಾರದ ಜಾರಿಗೆ ತಂದ ಯೋಜನೆಗಳು ಜನ ವಿರೋಧಿಯಾಗಿವೆ ಎಂದು ಕಾಂಗ್ರೆಸ್ ಯುವ ಸಮಿತಿ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಅಧಿಕಾರ ಹಿಡಿದಿದದ್ದರು ಸಹ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡದೆ ಜನ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ, ಎಂದು ಪ್ರತಿಭಟನಾ ನಿರತ ಕಾಂಗ್ರೆಸ್ ಯುವ ಘಟಕ ಕಾರ್ಯಕರ್ತರು ಎನ್‌ಡಿಎ ಸರ್ಕಾಎದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತ್ರಿವಳಿ ತಲಾಕ್, ಪೌರತ್ವ ನೋಂದಣಿ ಸೇರಿದಂತೆ ಅನೇಕ ಕೇಂದ್ರ ಸರ್ಕಾರ ಯೋಜನೆಯಿಂದ ದೇಶವಾಸಿಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಜಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಯುವ ಸಮೂಹ ಉದ್ಯೋಗ ಕಳೆದುಕೊಳ್ಳುವ ಹಂತಕ್ಕೆ ತಲುಪಿದರು, ಬಿಗಡಾಯಿಸಿದ ಆರ್ಥಿಕ ಸುಧಾರಣೆ ಕ್ರಮಕ್ಕೆ ಸರ್ಕಾರದ ಮುಂದಾಗಿಲ್ಲ, ಬದಲಾಗಿ ದೇಶ ವಾಸಿಗಳಿಗೆ ಧಕ್ಕೆ ತರುವಂತಹ ಕಾಯ್ದೆಗೆ ಮುಂದಾಗಿದೆ ಎಂದು ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ಅಬ್ದುಲ್ ಆಕ್ರೋಶ ಹೊರಹಾಕಿದರು.