ವಿಜಯಪುರ : ಹುಟ್ಟುಹಬ್ಬದ ಪ್ರಯುಕ್ತ 500 ಜನರಿಗೆ ಮಾಸ್ಕ್ ವಿತರಣೆ ಹಾಗೂ ಜನತಾ ಕರ್ಫೂ ಪಾಲನೆ ಮಾಡುವಂತೆ ಯುವಕನೊಬ್ಬ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾನೆ.
ನಗರದ ಗೋಪಾಲಪುರ ಬಡಾವಣೆಯಲ್ಲಿ ಕಿರಣ ಪಾಟೀಲ್ ಎಂಬ ಯುವಕ ತನ್ನ ಜನ್ಮದಿನದ ನಿಮಿತ್ತ ಕೂರೊನಾ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತನ್ನ ಸ್ನೇಹಿತರೊಂದಿಗೆ ಸೇರಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾನೆ. ರಸ್ತೆಯಲ್ಲಿ ಹೋಗುವ ಜನರಿಗೆ ಮಾಸ್ಕ್ ಧರಸಿ ಓಡಾಡುವಂತೆ ಹಾಗೂ ನಾಳೆ ಮನೆಯಿಂದ ಹೊರಗೆ ಬಾರದಂತೆ ಕೇಳಿಕೊಳ್ಳುತ್ತಿದ್ದಾನೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಯುವಕ, ರಾಜ್ಯದೆಲ್ಲೆಡೆ ಕೊರೊನಾ ಹೆಚ್ಚುತ್ತಿರುವುದರಿಂದ, ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾನೆ.