ETV Bharat / state

ಅನ್ಯ ಸಮುದಾಯದ ಯುವತಿ ಪ್ರೀತಿಸುತ್ತಿದ್ದ ಯುವಕ ನಾಪತ್ತೆ.. ಆಲಮೇಲದಲ್ಲಿ ಮರ್ಯಾದಾ ಹತ್ಯೆ? - ಮರ್ಯಾದೆ ಹತ್ಯೆ ಶಂಕೆ

ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಅನ್ಯ ಸಮುದಾಯದ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ನಾಪತ್ತೆಯಾಗಿದ್ದಾನೆ. ಯುವತಿ ಕಡೆಯವರಿಂದಲೇ ಆತನ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

young-man-missing-in-balaganuru-village-of-vijayapura
ಅನ್ಯ ಸಮುದಾಯದ ಯುವತಿ ಪ್ರೀತಿಸುತ್ತಿದ್ದ ನಾಪತ್ತೆ
author img

By

Published : Oct 23, 2021, 10:47 AM IST

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ಯುವಕನೋರ್ವ ನಾಪತ್ತೆಯಾಗಿದ್ದು, ಯುವತಿ ಕಡೆಯವರಿಂದಲೇ ಹತ್ಯೆಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಯುವತಿಯ ಎದುರೇ ಆಕೆಯ ಪ್ರಿಯಕರನನ್ನು ಸಂಬಂಧಿಕರು ಬರ್ಬರವಾಗಿ ಕೊಲೆ, ಇದು ಮರ್ಯಾದಾ ಹತ್ಯೆ ಎನ್ನುವ ಆರೋಪ ಕೇಳಿಬಂದಿದೆ.

ಬಳಗಾನೂರ ಗ್ರಾಮದ ಅನ್ಯ ಸಮುದಾಯದ ರವಿ ನಿಂಬರಗಿ (32) ಹಾಗೂ ಯುವತಿ ಪ್ರೀತಿಸುತ್ತಿದ್ದರು. ಆದರೆ ಇದಕ್ಕೊಪ್ಪದ ಯುವತಿಯ ಪೋಷಕರು ರವಿಯನ್ನು ಕೊಲೆ ಮಾಡಿ ಶವವನ್ನು ಯಾರಿಗೂ ತಿಳಿಯದಂತೆ ಹೊತ್ತೊಯ್ದು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರೀತಿ ವಿಚಾರವಾಗಿ ಎರಡೂ ಕುಟುಂಬಗಳ ಮಧ್ಯೆ ಸಾಕಷ್ಟು ಸಲ ವೈಮನಸ್ಸು ಉಂಟಾಗಿತ್ತು. ಈಗ ರವಿಯನ್ನು ಯುವತಿಯ ಕಡೆಯ 8 ಜನರು ಕರೆದುಕೊಂಡು ಬಂದು ಆಕೆಯ ಎದುರೇ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಣೆಯಾದ ಬಗ್ಗೆ ದೂರು:

ರವಿ ನಿಂಬರಗಿಯ ಕುಟುಂಬಸ್ಥರು ನಿನ್ನೆಯಿಂದ ತಮ್ಮ ಮಗ ಕಾಣಿಯಾಗಿದ್ದಾನೆ ಎಂದು ಆಲಮೇಲ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಲಮೇಲ ಪೊಲೀಸರು ತನಿಖೆ ನಡೆಸುತ್ತಿದ್ದು, ಬಳಗಾನೂರು ಗ್ರಾಮಕ್ಕೆ ಭೇಟಿ ನೀಡಿ ಯುವಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಯುವತಿಯ ಸಂಬಂಧಿಕರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕೊರಗಜ್ಜನ ಗುಡಿಯಲ್ಲಿ ಮದ್ಯ ಕದ್ದವನಿಗೆ ದೃಷ್ಟಿದೋಷ: ಕಾಣಿಕೆ ಕಟ್ಟಿ ತಪ್ಪೊಪ್ಪಿಕೊಂಡ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.