ವಿಜಯಪುರ: ಆಟವಾಡಲು ಹೋದ ಬಾಲಕ ವಾಟರ್ ಫಿಲ್ಟರ್ ಟ್ಯಾಂಕರ್ನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.
ನಿಡಗುಂದಿ ಪಟ್ಟಣಕ್ಕೆ ನೀರು ಸರಬರಾಜು ಆಗುವ ವಾಟರ್ ಫಿಲ್ಟರ್ ಟ್ಯಾಂಕರ್ನಲ್ಲಿ ಕಾಲು ಜಾರಿ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಶಿವಪ್ಪ ಹನುಮಂತ ಹುಂಡೆಕಾರ(11) ಸಾವಿಗೀಡಾದ ಬಾಲಕ. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.