ETV Bharat / state

ಶಾಸಕ ಯತ್ನಾಳ್​ಗೆ ಕೂಲೆ ಬೆದರಿಕೆ, ಕಠಿಣ ಕ್ರಮ ಜರುಗಿಸುವಂತೆ ಅಭಿಮಾನಿಗಳ ಮನವಿ - ಕಠಿಣ ಕ್ರಮ ಜರುಗಿಸುವಂತೆ ಅಭಿಮಾನಿಗಳ ಮನವಿ

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಬಹಿರಂಗವಾಗಿ ಕೂಲೆ ಬೆದರಿಕೆ ಹಾಕಿರುವ ವ್ಯಕ್ತಿಯ ಮೇಲೆ ಕಠಿಣ ಕ್ರಮ ಜರುಗಿಸುವಂತೆ, ಯತ್ನಾಳ್ ಅಭಿಮಾನಿಗಳ ಬಳಗದ ಸದಸ್ಯರು, ತಹಶೀಲ್ದಾರ್ ಮೂಲಕ ಕೇಂದ್ರ ಗೃಹಸಚಿವ ಅಮಿತ್ ಷಾ, ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Yatnal fans appeals for action against a threatened man
ಶಾಸಕ ಯತ್ನಾಳ್​ಗೆ ಕೂಲೆ ಬೆದರಿಕೆ, ಕಠಿಣ ಕ್ರಮ ಜರುಗಿಸುವಂತೆ ಅಭಿಮಾನಿಗಳ ಮನವಿ
author img

By

Published : Sep 9, 2020, 6:32 PM IST

Updated : Sep 9, 2020, 9:24 PM IST

ಮುದ್ದೇಬಿಹಾಳ: ಎಲ್ಲೊ ಒಂದು ಶ್ವಾನ ಬೊಗಳಿದರೆ ದೇವಲೋಕ ಹಾಳಾಗದು, ಅದರಂತೆ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜನ ಸೇವೆ ಮಾಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಬಹಿರಂಗವಾಗಿ ಕೂಲೆ ಬೆದರಿಕೆ ಹಾಕಿರುವ ವ್ಯಕ್ತಿ ದೇಶದ ಗಡಿಯಲ್ಲಿ ವೈರಿಗಳ ವಿರುದ್ಧ ತನ್ನ ಪೌರುಷತನ ತೋರಲಿ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಛೇರಿಗೆ ಆಗಮಿಸಿದ ಯತ್ನಾಳ್ ಅಭಿಮಾನಿಗಳ ಬಳಗದ ಸದಸ್ಯರು, ತಹಶೀಲ್ದಾರ್ ಮೂಲಕ ಕೇಂದ್ರ ಗೃಹಸಚಿವ ಅಮಿತ್ ಷಾ, ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶಾಸಕ ಯತ್ನಾಳ್​ಗೆ ಕೂಲೆ ಬೆದರಿಕೆ, ಕಠಿಣ ಕ್ರಮ ಜರುಗಿಸುವಂತೆ ಅಭಿಮಾನಿಗಳ ಮನವಿ

ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಇಂತಹ ವ್ಯಕ್ತಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕು, ಎಷ್ಟು ಜನರನ್ನು ಕಡಿದಿರಬೇಕು. ಚೀನಾದವರ ಮುಂದೆ ನಿನ್ನ ಪೌರುಷ ತೋರಿಸಬೇಕು. ಧೀಮಂತ ನಾಯಕ ಯತ್ನಾಳ ಅವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುವ ನಿನಗೆ ನಾಚಿಗೆ ಇದೆಯಾ? ಅವರ ಘನತೆಗೆ ಕುಂದು ಬಂದರೆ ಯತ್ನಾಳ್ ಅಭಿಮಾನಿಗಳು ಸುಮ್ಮನೆ ಕೂರುವುದಿಲ್ಲ. ಕೊಲೆ ಮಾಡುವುದಾಗಿ ಹೇಳಿಕೆ ಕೊಟ್ಟಿರುವ ವ್ಯಕ್ತಿಯ ಹಿಂದೆ ಯಾರು ಇದ್ದಾರೆ ಎಂದು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಲಿತ ಮುಖಂಡ ಸಿ.ಜಿ.ವಿಜಯಕರ್, ಡಿ.ಬಿ.ಮುದೂರ ಮಾತನಾಡಿ, ಯತ್ನಾಳ ಗೌಡ್ರು ಅಂಬೇಡ್ಕರ್ ಬಗ್ಗೆ ಎಲ್ಲಿಯೂ ಕೆಟ್ಟದ್ದಾಗಿ ಮಾತನಾಡಿಲ್ಲ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಕ್ಕೆ ಬದ್ಧರಾದ ಯತ್ನಾಳರ ವಿರುದ್ಧ ಮಾತನಾಡಿದ ದಲಿತ ವ್ಯಕ್ತಿ ಕೂಲೆ ಬೆದರಿಕೆಯನ್ನು ಖಂಡಿಸುತ್ತೇವೆ. ಆ ವ್ಯಕ್ತಿ ಎಂತವನೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುವುದಾಗಿ ಹೇಳಿದರು.

Last Updated : Sep 9, 2020, 9:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.