ETV Bharat / state

ಪ್ರಿಯತಮನ ತೊಡೆ ಮೇಲೆ ಸಾವನ್ನಪ್ಪಿದ ಪ್ರಿಯತಮೆ ಪ್ರಕರಣಕ್ಕೆ ಟ್ವಿಸ್ಟ್- 3ನೇಯವನೊಂದಿಗೆ ಇತ್ತಾ LOVE? - women died by consuming a poison

ಸಾವನ್ನಪ್ಪಿದ ರೇಣುಕಾ ಝಳಕಿಗೆ ಹಡಲಗೇರಿ ಗ್ರಾಮದ ಬಸವರಾಜ ಹಣಮಂತ್ರಾಯ ಕಿಲಾರಹಟ್ಟಿಯೊಂದಿಗೆ ಅನೈತಿಕ ಸಂಬಂಧವಿದ್ದು, ಇದರೊಟ್ಟಿಗೆ ಇನ್ನೂ ಒಬ್ಬರ ಜೊತೆಗೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಇದರಿಂದಲೇ ಆಕೆಯ ಮೊದಲನೇ ಪ್ರಿಯಕರ ಬಸಪ್ಪ ಅಲಿಯಾಸ್​ ಬಸವರಾಜ ಹಣಮಂತ್ರಾಯ ಕಿಲಾರಹಟ್ಟಿ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

women died by consuming a poison case took twist
ಪ್ರಿಯತಮನ ತೊಡೆ ಮೇಲೆ ಸಾವನ್ನಪ್ಪಿದ ಪ್ರಿಯತಮೆ ಪ್ರಕರಣ
author img

By

Published : Jun 24, 2021, 8:05 PM IST

Updated : Jun 24, 2021, 9:52 PM IST

ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಜೂ. 22ರಂದು ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ವಿಷ ಸೇವನೆ ಮಾಡಿ ವಿವಾಹಿತ ಮಹಿಳೆ ಸಾವಿನ್ನಪ್ಪಿದ್ದ ಘಟನೆ ಸಂಬಂಧ ಪೊಲೀಸರ ವಿಚಾರಣೆ ಮುಂದುವರೆದಿದ್ದು, ಇದೀಗ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ.

ಸಾವನ್ನಪ್ಪಿದ ರೇಣುಕಾ ಝಳಕಿಗೆ ಹಡಲಗೇರಿ ಗ್ರಾಮದ ಬಸವರಾಜ ಹಣಮಂತ್ರಾಯ ಕಿಲಾರಹಟ್ಟಿಯೊಂದಿಗೆ ಅನೈತಿಕ ಸಂಬಂಧವಿದ್ದು, ಇದರೊಟ್ಟಿಗೆ ಇನ್ನೂ ಒಬ್ಬರ ಜೊತೆಗೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಇದರಿಂದಲೇ ಆಕೆಯ ಮೊದಲನೇ ಪ್ರಿಯಕರ ಬಸಪ್ಪ ಅಲಿಯಾಸ್​ ಬಸವರಾಜ ಹಣಮಂತ್ರಾಯ ಕಿಲಾರಹಟ್ಟಿ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರುವ ಬಲವಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಅನೈತಿಕ ಸಂಬoಧಕ್ಕೆ ವಿವಾಹಿತೆ ಗಂಗೂರು ಗ್ರಾಮದ ರೇಣುಕಾ ಝಳಕಿ ವಿಷ ಸೇವಿಸಿ ಸಾವಿಗೀಡಾಗಿದ್ದ ಪ್ರಕರಣ ತಿರುವು ಪಡೆದು ಕೊಂಡಿದೆ. ಇದು ಪೂರ್ವನಿಯೋಜಿತ ಕೊಲೆ ಎಂದು ಮೃತ ರೇಣುಕಾಳ ಸಹೋದರ ಲಕ್ಕಪ್ಪ ನಿಗರಿ ಮುದ್ದೇ ಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಏತನ್ಮಧ್ಯೆ ಘಟನೆ ನಡೆದಾಗ ಅತಿಯಾಗಿ ಮದ್ಯದ ಜತೆ ವಿಷವನ್ನು ಸೇವಿಸಿ ಪ್ರಜ್ಞೆ ತಪ್ಪಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದ ಆರೋಪಿ (ಪ್ರಿಯಕರ) ಹಡಲಗೇರಿ ಗ್ರಾಮದ ಬಸಪ್ಪ ಕಿಲಾರಹಟ್ಟಿ ಚೇತರಿಸಿಕೊಳ್ಳುತ್ತಿದ್ದು ಪೊಲೀಸರ ವಿಚಾರಣೆಗೆ ಒಳಗಾಗಿದ್ದಾನೆ.

ದೂರಿನಲ್ಲೇನಿದೆ?

ಕಾಳಗಿ ಗ್ರಾಮದ ರೇಣುಕಾಳನ್ನು ಗಂಗೂರು ಗ್ರಾಮದ ಅಶೋಕನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಒಂದು ಗಂಡು, ಹೆಣ್ಣು ಸೇರಿ ಎರಡು ಮಕ್ಕಳು ಇದ್ದರು. ವರ್ಷದ ಹಿಂದೆ ಅಶೋಕ್​ ಕೇರಳಕ್ಕೆ ಚೇರೆಕಲ್ಲು ಗಣಿಯಲ್ಲಿ ಕೆಲಸ ಮಾಡಲು ಗುಳೇ ಹೋಗಿದ್ದನು. ಈ ಹಂತದಲ್ಲಿ ಬಸಪ್ಪ (ಬಸವರಾಜ ಹಣಮಂತ್ರಾಯ ಕಿಲಾರಹಟ್ಟಿ)ನ ಸ್ನೇಹ ಬೆಳೆಸಿಕೊಂಡಿದ್ದ ರೇಣುಕಾ ಅಕ್ರಮ ಸಂಬoಧ ಹೊಂದಿದ್ದಳು.

ಇದನ್ನು ತಿಳಿದು ಮನೆಯವರು ಹಲವು ಬಾರಿ ಬುದ್ದಿ ಹೇಳಿದ್ದರು. ಬೆಳೆದು ದೊಡ್ಡವರಾದ ಮಕ್ಕಳೆದುರು ಹೀಗೆ ಮಾಡೋದು ಸರಿಯಲ್ಲ ಎಂದು ತಿಳಿವಳಿಕೆ ಹೇಳಿದ್ದರು. ಆದರೂ ಇಬ್ಬರು ಅನೈತಿಕ ಸಂಬoಧ ಮುಂದುವರೆಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: 'ಸಹೋದರಿ ಮೇಲೆ ಬಲಾತ್ಕಾರ ಮಾಡಿ ಕೊಲೆಗೈದವನಿಗೆ ಕಠಿಣ ಶಿಕ್ಷೆ ಕೊಡಿಸಿ'

ಜೂ. 21ರಂದು ಅಬ್ಬಿಹಾಳ ಗ್ರಾಮದಲ್ಲಿರುವ ಸಂಬoಧಿಕರೊಬ್ಬರ ಮನೆಗೆ ಹೋಗಿ ಬರುವುದಾಗಿ ಗಂಗೂರಿನಿoದ ಬಂದಿದ್ದ ರೇಣುಕಾ ಜೂ. 22ರಂದು ಮದ್ಯಾಹ್ನ 2 ಗಂಟೆ ಹೊತ್ತಿಗೆ ಬಿದರಕುಂದಿ ಗ್ರಾಮ ವ್ಯಾಪ್ತಿಯ ಕುಂಟೋಜಿ ಸೀಮೆಯ ಹೊಲವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈಕೆಯ ಜತೆಗೆ ಬಸಪ್ಪನೂ ಪ್ರಜ್ಞಾಹೀನನಾಗಿ ಬಿದ್ದಿದ್ದ. ವಿಷಯ ತಿಳಿದು ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿದ್ದು, ರೇಣುಕಾಳ ಮುಖದ ಮೇಲೆ ಗಾಯದ ಗುರುತು ಇದ್ದವು. ಬಾಯಿಂದ ರಕ್ತ ಬಂದಿತ್ತು.

ಇದನ್ನೆಲ್ಲ ಗಮನಿಸಿದರೆ ಬಸಪ್ಪನು ತನ್ನ ಅಕ್ರಮ ಸಂಬoಧ ಮುಚ್ಚಿಹಾಕಲು ರೇಣುಕಾಳಿಗೆ ಏಕಾಂತ ಸ್ಥಳಕ್ಕೆ ಕರೆದೊಯ್ದು ಹೊಡೆದು, ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

ಇದನ್ನೂ ಓದಿ: ಪ್ರಿಯತಮನ ತೊಡೆ ಮೇಲೆ ನರಳಿ ನರಳಿ ಪ್ರಾಣ ಬಿಟ್ಟ ಪ್ರಿಯತಮೆ..ಆತನ ಸ್ಥಿತಿಯೂ ಗಂಭೀರ

Last Updated : Jun 24, 2021, 9:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.